ಓ ಮನಸೇ.. ರವಿ ಬೆಳಗೆರೆ

Read O Manase Online

O Manase- 102

O Manase 101
O Manase - Read on ipad, iphone, smart phone and tablets
ಶತಕದ ಸಂಭ್ರಮದ ನಂತರ ಬರುತ್ತಿರುವ ಮೊದಲ ಸಂಚಿಕೆ.. ಓ ಮನಸೇ.. ೧೦೧ ಈಗ ಮಾರುಕಟ್ಟೆಯಲ್ಲಿ... ಮಾತೇ ಮುತ್ತು ಮಾತೇ ಶತ್ರು ಬರಹಗಾರರಿಗೆ ಒಂದು ಮಾನ್ಯತೆಯನ್ನು ತಂದುಕೊಟ್ಟ ಉದ್ಯಮವೆಂದರೆ ಟೀವಿ ಸೀರಿಯಲ್ಲು. ಸಿನಿಮಾಗಳಲ್ಲಿ ಡೈಲಾಗು ಬರೆಯುವವರಿಗೆ ಮರ್ಯಾದೆ ಮತ್ತು ಸಂಭಾವನೆ ಎರಡೂ ಕಡಿಮೆಯಾಗಿದ್ದ ಕಾಲದಲ್ಲಿ ಈ ಶೋಷಿತವರ್ಗಕ್ಕೆ ಆಶಾಕಿರಣವಾಗಿ ಕಾಣಿಸಿದ್ದು ಸೀರಿಯಲ್ ಲೋಕ. ಈಗ ದಿನಕ್ಕೆ ೫೪ ಸೀರಿಯಲ್ಲುಗಳು ಪ್ರಸಾರವಾಗುತ್ತಿವೆ, ನೂರಾರು ಬರಹಗಾರರು ಇವುಗಳನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಸೃಜನಶೀಲತೆ ಮತ್ತು ಆರೋಗ್ಯದ ಪ್ರಶ್ನೆ ಬಂದಾಗ ಸೀರಿಯಲ್ಲುಗಳು ಒಬ್ಬ ಬರಹಗಾರನನ್ನು ಕೊಲ್ಲುತ್ತಿವೆ ಅನ್ನುವುದೂ ಕೂಡಾ ಅಷ್ಟೇ ಸತ್ಯ. ಮಾತನ್ನೇ ಹರಿಗೋಲಾಗಿಸಿಕೊಂಡು ಸಂಸಾರ ಶರಧಿಯನ್ನು ದಾಟುತ್ತಿರುವ ರೈಟರುಗಳ ಬಗ್ಗೆ ಇಲ್ಲೊಂದು ಅನುಕಂಪಭರಿತ ಬರಹವಿದೆ. ಕಣ್ಣೀರಿಡುತ್ತಲೇ ಓದಿಕೊಳ್ಳಿ. ಸೀರಿಯಲ್ ಕಹಾನಿ ಫೇಸ್ಬುಕ್ ಕ್ರಾಂತಿಯ ಕಾಲದಲ್ಲಿ ರೋಸಾ ನೆನಪು ಫೇಸ್ ಬುಕ್ಕಲ್ಲಿ ವ್ಯವಸ್ಥೆಯ ವಿರುದ್ಧ ಒಂದು ಸ್ಟೇಟಸ್ ಹಾಕಿದ್ದನ್ನೇ ಕ್ರಾಂತಿ ಎಂದು ಅಂದುಕೊಳ್ಳುವ ಈಗಿನ ತಲೆಮಾರಿಗೆ ಅಸಲಿ ಹೋರಾಟದ ಬಿಸಿಯೇ ಗೊತ್ತಿಲ್ಲ. ಹೋರಾಟ ಅಂದರೆ ಅನ್ಯಾಯದ ವಿರುದ್ಧ ಮುಖಾಮುಖಿಯಾಗುವುದು, ಅದಕ್ಕೊಂದು ತಾರ್ಕಿಕ ಅಂತ್ಯ ದೊರಕುವ ತನಕ ವಿರಮಿಸದೇ ಇರುವುದು. ಆ ಕೆಲಸ ಮಾಡಿ, ಗೆದ್ದ ಕರಿಯ ಹೆಣ್ಮಗಳೊಬ್ಬಳ ಕತೆ ಇಲ್ಲಿದೆ. ಓದಿ ಚೈತನ್ಯದ ಚಿಲುಮೆ. ಕಾವಿಯೊಳಗಿನ ಕಾಮಕ್ಕೆ ಫುಲ್‌ಸ್ಟಾಪಿಲ್ಲ ಈಗಿನ ವ್ಯವಸ್ಥೆಯಲ್ಲಿ ಮಠಗಳು ಸನ್ಯಾಸಿಗಳನ್ನು ತಯಾರು ಮಾಡುತ್ತಿರುವ ರೀತಿಯೇ ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿದೆ. ಸನ್ಯಾಸವೆಂಬುದು ಒಂದು ಮನಸ್ಥಿತಿ. ಅದು ನಮ್ಮೊಳಗೇ ಹುಟ್ಟಬೇಕು. ಶಂಕರಾಚಾರ್ಯರು ಸನ್ಯಾಸಿಯಾಗಿದ್ದು ಹೀಗೆ. ಆದ್ದರಿಂದಲೇ ಅವರು ಪರಮಾಚಾರ್ಯರಾದರು. ಆದರೆ, ಈಗ ಹಿರಿಯ ಸ್ವಾಮಿಗಳಿಗೆ ವಯಸ್ಸಾಯಿತು ಎಂದು ಮಠದ ಆಡಳಿತ ಮಂಡಳಿಗಳು ಯಾವುದೋ ಊರಿನಲ್ಲಿ ಆಟವಾಡಿಕೊಂಡಿದ್ದ ಮೀಸೆ ಮೂಡದ ಹುಡುಗನನ್ನು ತಂದು ಕೂದಲು ತೆಗೆಸಿ ಸನ್ಯಾಸ ದೀಕ್ಷೆ ಕೊಡಿಸಿಬಿಡುತ್ತವೆ. ಅವನು ನಿಜವಾದ ಸನ್ಯಾಸಿಯಾಗಲು ಹೇಗೆ ಸಾಧ್ಯ? ಪ್ರಶ್ನೆಗಳಿವೆಯೇ.. ಉತ್ತರಕ್ಕಾಗಿ ಓದಿ ಇದ್ದದ್ದು ಇದ್ಹಾಂಗೆ. ಗುರಿಯಿಲ್ಲದೇ ಬದುಕಿದ ಗುರುವಿನ ದುರಂತ ಕತೆ ಬ್ರಾಹ್ಮಣನಾಗಿ ಹುಟ್ಟಿ ಕ್ಷತ್ರಿಯನಂತೆ ಹೋರಾಡಿ ಮಹಾಭಾರತ ಯುದ್ಧದಲ್ಲಿ ಮಡಿದ ದ್ರೋಣನ ಜೀವಿತದ ಉದ್ದೇಶ ಏನಾಗಿತ್ತು? ಏಕಲವ್ಯನ ಬೆರಳು ಪಡೆದ ಅವರ ಮನಸ್ಸಲ್ಲೇನಿತ್ತು? ಎರಡೂ ಕಡೆ ತನ್ನ ಶಿಷ್ಯರಿದ್ದಾಗ, ಅಧರ್ಮದ ಪರ ನಿಂತಿದ್ದೇನೆ ಎಂದು ಗೊತ್ತಿದ್ದೂ ಯುದ್ಧ ಮಾಡುವಾಗ ಅವರು ಏನು ಸಂಕಟ ಪಡುತ್ತಿದ್ದರು? ಇವೆಲ್ಲವೂ ಇಂದಿಗೂ ನಿಗೂಢ. ಪುರಾಣ ಪ್ರಪಂಚದಲ್ಲಿ ದ್ರೋಣಾಚಾರ್ಯರ ಆಂತುರ್ಯ ಕಂಡೀತೇ ಓದಿ ನೋಡಿ.. ದೀಪಾವಳಿ ಹಬ್ಬದ ಖಾಯಂ ಅತಿಥಿ ಬಲಿ ಭಗವಂತ ಕೃಪೆ ಮಾಡಿದರೆ ಯಾರು ಏನೂ ಆಗಬಲ್ಲರು. ಭಕ್ತರಿಗಾಗಿ ಭಗವಂತನೂ ಸಹ ಏನೂ ಆಗಬಲ್ಲನು ಅನ್ನುವುದಕ್ಕೆ ಬಲಿ ಶ್ರೇಷ್ಠ ಉದಾಹರಣೆ. ಈ ನೆನಪಿನಾರ್ಥವಾಗಿಯೇ ಪ್ರತಿವರ್ಷ ನಾವು ದೀಪಾವಳಿಯನ್ನು ವೈಭವದಿಂದ ಆಚರಿಸೋದು. ವಿಷ್ಣುವಿನ ವರದಂತೆ ಪ್ರತಿದಿನ ನಮ್ಮೆಲ್ಲರ ಯೋಗಕ್ಷೇಮ ವಿಚಾರಿಸಲಿಕ್ಕೆ ಬಲಿ ಬರ‍್ತಾನೆ. ಹಾಗಾಗಿ ಈ ದಿನದಲ್ಲಿ ಬಲಿಯನ್ನು ಪೂಜಿಸಿ ಗೌರವಿಸುವ ಪದ್ದತಿ ಆಚರಣೆಯಲ್ಲಿದೆ. ಬನ್ನಿ, ಬಲಿಚಕ್ರವರ್ತಿಯ ಕತೆಯನ್ನು ಆಲಿಸಿ ಪುಣ್ಯ ಸಂಪಾದಿಸಿ ಆಚಾರ ವಿಚಾರದಲ್ಲಿ. ಸುಝುಕಿ ಜಿಕ್ಸರ್, ಯುವಕರ ರಾಕ್‌ಸ್ಟಾರ್! ಬೈಕ್ ರೈಡಿಂಗ್ ಎಂಜಾಯ್ ಮಾಡುವ ಪ್ರತಿಯೊಬ್ಬರಿಗೂ ಜಿಕ್ಸರ್ ಬೆಸ್ಟ್. ಆದರೆ ಈ ಬೈಕ್ ಸ್ವಲ್ಪ ಎತ್ತರಕ್ಕಿರುವವರಿಗೆ ಚೆನ್ನಾಗಿದೆ. ಸೀಟ್ ಎತ್ತರ ೭೮೦ಎಂಎಂ ಇರುವುದರಿಂದ ಕುಳ್ಳಗೆ ಇರುವವರಿಗೆ ಸ್ವಲ್ಪ ಕಷ್ಟ. ಇನ್ನೂ ಡೀಟೇಲ್ಸ್ ಬೇಕೇ ವಾಟ್ಸ್ ಆಪ್ ಕಾಲಂನಲ್ಲಿ ನೋಡಿ. ಆದಾಯ ಇರುವ ಕಡೆಯೆಲ್ಲಾ ತೆರಿಗೆಯೂ ಇರುತ್ತದೆ ಆದಾಯ ತೆರಿಗೆ ಕಾನೂನಿನಡಿಯಲ್ಲಿ ಯಾವುದೇ ಸ್ಥಿರಾಸ್ಥಿಗಳನ್ನು ಮಾರಾಟ ಮಾಡಿದಾಗ ಬರುವ ಲಾಭಕ್ಕೆ ತೆರಿಗೆ ಕಟ್ಟಬೇಕು. ಇದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎನ್ನುತ್ತಾರೆ. ನೆನಪಿರಲಿ, ನೀವು ತೆರಿಗೆ ಕಟ್ಟಬೇಕಾದ್ದು ಲಾಭಕ್ಕೆ ಮಾತ್ರ, ಮಾರಾಟದ ಒಟ್ಟು ಮೊತ್ತಕ್ಕೆ ಅಲ್ಲ. ಆದಾಯ ತೆರಿಗೆ ಮೂಲ ಮಂತ್ರವೇ ಹಾಗೆ. ನಿಮ್ಮ ಆದಾಯಕ್ಕೆ ತೆರಿಗೆ. ಹೆಚ್ಚಿನ ವಿವರಗಳು ಲಾ ಪಾಯಿಂಟ್‌ನಲ್ಲಿ.. ಇದರೊಂದಿಗೆ ಒಂದಷ್ಟು ಕವನ, ಪುಟ್ಟ ಲೇಖನಗಳು, ಮೆಚ್ಚಿದ ಹಾಡುಗಳ ಬಗ್ಗೆ ಓದುಗರು ಬರೆದುಕೊಂಡ ಪತ್ರಗಳು ಎಲ್ಲವನ್ನೂ ತುಂಬಿಕೊಂಡು ಬರುತ್ತಿದೆ ಓ ಮನಸೇ ೧೦೧ನೇ ಸಂಚಿಕೆ...


 O Manase 100
O Manase - Read on ipad, iphone, smart phone and tablets
ಓ ಮನಸೇ..ಯ ಸೆಂಚುರಿ, ಹೊಡೀರಿ ಚಪ್ಪಾಳೆ ಇದು ಭರ್ಜರಿ ಶತಕ. ನರ್ವಸ್ ನೈಂಟಿ ನಮ್ಮನ್ನು ಕಾಡಲಿಲ್ಲ, ರನೌಟ್ ಆಗುತ್ತೇವೋ ಎಂಬ ಭೀತಿಯೂ ಬಾಧಿಸಲಿಲ್ಲ. ಒಂದು ನಿರಾಯಾಸದ ಸಿಕ್ಸರ್ ನೊಂದಿಗೆ ‘ಓ ಮನಸೇ’ ಸೆಂಚುರಿ ಬಾರಿಸಿದೆ. ಈ ನೂರರ ಪಯಣದಲ್ಲಿ ಮನಮೋಹಕ ಸ್ವ್ಕೇರ್ ಕಟ್ ಗಳಿವೆ, ಲಾಲಿತ್ಯಪೂರ್ಣ ಲೆಗ್ ಗ್ಲಾನ್ಸ್ ಗಳಿವೆ, ಸತ್ವಯುತ ಕವರ್ ಡ್ರೈವ್ ಗಳಿವೆ. ನಮ್ಮ ಪ್ರತಿಯೊಂದು ಹೊಡೆತಕ್ಕೂ ನಿಮ್ಮ ಚಪ್ಪಾಳೆ ಬಿದ್ದಿದೆ ಅನ್ನುವುದೇ ವಿಶೇಷ. ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಶ್ರದ್ಧೆ, ಹುಮ್ಮಸ್ಸು, ಉತ್ಸಾಹಗಳನ್ನು ಬಂಡವಾಳವಾಗಿಟ್ಟುಕೊಂಡು ಈ ನೂರರ ಸಂಚಿಕೆಯನ್ನು ರೂಪಿಸಿದ್ದೇವೆ. ಕಿರುಚಾಡಲಿಲ್ಲ, ಚೀರಾಡಲಿಲ್ಲ, ಪಿಸುಮಾತಲ್ಲೇ ಎಲ್ಲವನ್ನೂ ಹೇಳುತ್ತಾ ನಸುನಾಚಿಕೆಯೊಂದಿಗೆ ಸೆಂಚುರಿ ಕ್ಲಬ್ಬಲ್ಲಿ ಕುಳಿತಿದ್ದೇವೆ. ವಾಹ್ ನರ! ವೇಗಸ್ ನರ ನರಮಾನವನ ಒಳಗಿರುವ ಈ ನರವನ್ನು ಮೀಟಿದರೆ ಸಾಕು, ಬದುಕು ಸುಂದರ. ಮನಸ್ಸು ಮತ್ತು ದೇಹವನ್ನು ಬೆಸೆಯುವ ವೇಗಸ್ ನರಕ್ಕೆ ತರಬೇತಿ ನೀಡುವುದಕ್ಕೆ ಡಾಕ್ಟರ್ ಬೇಕಿಲ್ಲ. ಕುಳಿತಲ್ಲೇ ಟ್ಯೂನ್ ಮಾಡಬಹುದು ಎಂದು ಪತ್ತೆ ಮಾಡಿದ್ದಾರೆ ಈ ಯುಗದ ಪ್ರಸಿದ್ಧ ಸಂಶೋಧಕ ನಾಗೇಶ್ ಹೆಗಡೆ. ವಾನರರಂತೆ ವರ್ತಿಸುವ ಮಾನವರೆಲ್ಲರೂ ಓದಲೇಬೇಕಾದ ಲೇಖನ. ಅವನು 16000 ಕಿಲೋಮೀಟರ್ ನಡೆದ.. ಅವನು ನಮ್ಮ ಹಿಮಾಲಯದ ಕಂದರಗಳಲ್ಲಿ 25 ವರ್ಷ ಅಲೆದಾಡಿದ. ಶಿಕ್ಷಕನಾಗಿದ್ದವನು ಭಿಕ್ಷುಕನ ವೇಷದಲ್ಲಿ ಟಿಬೆಟ್ಟಿನ ನೆಲವನ್ನು ಇಂಚಿಂಚಾಗಿ ಅಳೆದ. ವಿಕ್ಟೋರಿಯಾ ರಾಣಿಯಿಂದ ಚಿನ್ನದ ಪದಕ ಪಡೆದುಕೊಂಡ ಈ ಅಲೆಮಾರಿ ಮತ್ತು ಗೂಢಚಾರಿಯ ರೋಚಕ ಕತೆಯಿದು. ಇವನ ಮುಂದೆ ಜೇಮ್ಸ್ ಬಾಂಡ್ 000. ಹೂಂ ಅಂತೀಯಾ..ಊಹೂಂ ಅಂತೀಯಾ.. ಇದೊಂದು ಅವಳ ಮುಂದೆ ಮಂಡಿಯೂರಿ ಕುಳಿತವನ ಕೈಯಲ್ಲಿ ಕೆಂಪು ಗುಲಾಬಿ, ಅವಳ ಕೆನ್ನೆಯೂ ಗುಲಾಬಿಯಾದರೆ ಪ್ರೀತಿ ಸಕ್ಸೆಸ್. ಇದು ಹಳೇ ಸ್ಟೈಲು. ಈಗ ವಾಟ್ಸಾಪ್ ನಲ್ಲೇ ಗುಲಾಬಿ ಕಳಿಸಬಹುದು, ಅವಳು ನಾಚಿಕೊಳ್ಳದೆಯೇ ಒಲಿಯಬಹುದು. ನಿಧನಿಧಾನವಾಗಿ, ವಿಧವಿಧಾನವಾಗಿ ಹುಡುಗಿಯರನ್ನು ಒಲಿಸಿಕೊಳ್ಳುವ ಟಾಪ್ ಟೆನ್ ಸೂತ್ರಗಳನ್ನು ನಿಮ್ಮ ಮುಂದೆ ಸಾದರಪಡಿಸುತ್ತಿದ್ದಾರೆ ನಮ್ಮ ಲವ್ ಗುರು ಜೋಶೀಲಾ. ಇದು ಮೀಟರ್ ಇರುವವರಿಗೆ ಮಾತ್ರ. ನಾ ನಿಮ್ಮ ಮರೆಯಲಾರೆ... ನಾವು ಹೀರೋಗಳ ಬಗ್ಗೆ ಮಾತಾಡೋದಿಲ್ಲ, ಅವರು ನಿರ್ವಹಿಸಿದ ಪಾತ್ರಗಳ ಬಗ್ಗೆ ಮಾತಾಡುತ್ತೇವೆ. ಆ ಪಾತ್ರಗಳು ಯಾಕೆ ನಮ್ಮ ಭಾವಕೋಶದೊಳಗೆ ಇಂದಿಗೂ ಭದ್ರವಾಗಿ ಕುಳಿತಿವೆ ಅನ್ನುವುದರ ಬಗ್ಗೆ ಮಾತಾಡ್ತೇವೆ. ಉದಾಹರಣೆಗೆ ಬಂಗಾರದ ಮನುಷ್ಯ ಚಿತ್ರದ ರಾಜೀವ. ಇಂಥಾ ಟಾಪ್ ಟೆನ್ ಪಾತ್ರಗಳನ್ನು ನೆನೆಯುವುದೇ ಒಂದು ಪುಣ್ಯ ಕಾರ್ಯ ಅಲ್ವೇ? . ಒಳ್ಳೇ ಪುಸ್ತಕಗಳ ಕಡೆ ಓಡು... ಮೇಲಿನದ್ದು ಹೆಡಿಂಗು. ಶುದ್ಧವಾಗಿರೋದೊಂದೇ ಓದು ಅನ್ನೋದು ಬಾಟಮ್ ಲೈನು. ಕತೆ, ಕವನ, ಅನುವಾದ, ಆಧ್ಯಾತ್ಮ ಅನ್ನುವ ತಾರತಮ್ಯವನ್ನು ಮಾಡದೇ ಕಳೆದ ಕೆಲವು ವರ್ಷಗಳಲ್ಲಿ ಬಂದ ಅತ್ಯುತ್ತಮ ಹತ್ತು ಪುಸ್ತಕಗಳ ಬಗ್ಗೆ ಪುಟ್ಟಪುಟ್ಟ ಟಿಪ್ಪಣಿಗಳು ಇಲ್ಲಿವೆ. ಮೊದಲು ಇದನ್ನು ಓದಿ, ಆಮೇಲೆ ಆ ಪುಸ್ತಕಗಳನ್ನು ಓದಿ. ಯಾಕೆಂದರೆ ಟಿಪ್ಪಣಿ ಬರೆದವರು ಕನ್ನಡ ಸಾಹಿತ್ಯವನ್ನು ಅರೆದು ಗಟಗಟ ಕುಡಿದಿರುವ ನೇವಿ ಅವರು. ಅವರ ಶಿಫಾರಸ್ಸನ್ನು ಯಾರೂ ತಳ್ಳಿಹಾಕುವ ಹಾಗೇ ಇಲ್ಲ. ಆಕೆಯನ್ನು ಇದೊಂದು ಸಲ ನೀನು ಕ್ಷಮಿಸಬೇಕು ಸತ್ಯ ಹೇಳಿದರೆ ಸತ್ಯನಾಶ್. ಮದುವೆಗೆ ಮುಂಚೆ ನನಗೆ ಇನ್ನೊಬ್ಬನೊಂದಿಗೆ ಸಂಬಂಧ ಇತ್ತು. ಹಾಗಂತ ಹೆಂಡತಿ ಹೇಳಿದರೆ ಗಂಡನಿಗೆ ಸಿಡಿಲು ಬಡಿಯದೇ ಇರುತ್ತದೆಯೇ? ಆತನ ಯಮಯಾತನೆಗೂ ರವಿ ಬೆಳಗೆರೆ ಪರಿಹಾರ ಹೇಳುತ್ತಾರೆ ‘ಸಮಾಧಾನ’ದಿಂದ. ಸಾವಿರ ಸಂತೋಷ ಮತ್ತು ಮರೆಯಾಗದ ದುಃಖ ಅಡಿಗರ ಒಡೆದು ಬಿದ್ದ ಕೊಳಲು ನಾನು ಕವಿತೆ ತನ್ನನ್ನು ಬೆಳದಿಂಗಳಂತೆ ಸುಟ್ಟ ಪರಿಯನ್ನು ನೆನೆಯುತ್ತಾ ರವಿಬೆಳಗೆರೆ ಅವರು ಸ್ನೇಹರಾಹಿತ್ಯ ಬದುಕಿನ ಕಷ್ಟಗಳನ್ನು ಹೇಳಿಕೊಂಡಿದ್ದಾರೆ ಮನಸಿನ್ಯಾಗಿನ ಮಾತು ಅಂಕಣದಲ್ಲಿ. ಇಂಥಾ ಖಿನ್ನತೆ ನಿಮ್ಮನ್ನು ಆಗಾಗ ಕಾಡಿರಬಹುದು. ಆದರೆ ಗೆಳೆಯರೊಬ್ಬರು ಬಳಿಗೆ ಬಂದಾಗ ಮನಸು ಹಗುರ ಹಗುರ. ಮಳೆ ನಿಂತು ಹೋದಮೇಲೆ.... ಅಸಲಿ ಸಾಹಿತ್ಯದಿಂದ ಸಿನಿಮಾ ಸಾಹಿತ್ಯಕ್ಕೆ ಮತಾಂತರಗೊಂಡ ಕವಿ ಜಯಂತ್ ಕಾಯ್ಕಿಣಿ ಅವರು ತಮ್ಮ ಹಾಡುಪಾಡುಗಳ ಬಗ್ಗೆ ಆತ್ಮೀಯವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ಸಾವಾಸ ಅವರಿಗೆ ಬೇಸರಕ್ಕಿಂತ ಸುಖವನ್ನೇ ಜಾಸ್ತಿ ತಂದುಕೊಟ್ಟಿದೆ ಅನ್ನೋದು ಶುಭಸುದ್ದಿ. ಹೊಸಕವಿಗಳಿಗೆ ಒಂದಿಷ್ಟು ಟಿಪ್ಸ್ ಕೂಡಾ ಇಲ್ಲಿದೆ. ಜಾನಕಿ ಕಾಲಂನಲ್ಲಿ ನಾಯಕನಿಗೊಂದು ಆಘಾತ ಕಾದಿದೆ, ಅದೇನೂಂತ ನಾವು ಹೇಳೋಲ್ಲಪ್ಪ! ಚೈತನ್ಯದ ಚಿಲುಮೆ ಅಂಕಣದಲ್ಲಿ ಗೆದ್ದವನ ಕತೆಯಿದೆ, ಓದುಗರು ಮೆಚ್ಚಿದ ಹಾಡುಗಳಿಗೇ ಐದು ಪುಟಗಳು ಮೀಸಲಾಗಿವೆ, ಕುರುಕ್ಷೇತ್ರದ ರವಿಶಾಸ್ತ್ರಿ ಸಂಜಯನ ಪರಿಚಯ ಪುರಾಣಪ್ರಪಂಚ ಕಾಲಂನಲ್ಲಿದೆ, ಕುಂತಲ್ಲೇ ಕೈಲಾಸ ಅನ್ನುವ ಸೋಂಬೇರಿ ಬೆಂಗಳೂರಿಗರ ಬಗ್ಗೆ ಮಹಾಶ್ವೇತ ಗೇಲಿ ಮಾಡಿದ್ದಾರೆ, ಎಲ್ಲಿದ್ದಾನೆ ನಿಮ್ಮ ದೇವರು ಅಂತ ಥೇಟು ಹಿರಣ್ಯಕಶಿಪುವಿನಂತೆ ಘರ್ಜಿಸಿದ್ದಾರೆ ಗೀತಾಸುತ. ಶತಕ ಬಾರಿಸಿದ ಸಂಭ್ರಮಕ್ಕೆ ಇಷ್ಟು ಸಾಕಲ್ವಾ. ಹಾಂ, ಇವೆಲ್ಲದರ ಜೊತೆ ಬೋನಸ್ ರೂಪದಲ್ಲಿ ಮುಖಪುಟದಲ್ಲಿ ರವಿ ಇದ್ದಾರೆ, ಅವರ ಮಾತುಗಳಿವೆ, ಸಹಿಯಿದೆ. ಅಂಗಡಿಗೆ ಓಡಿ, ಓ ಮನಸೇ ಓದಿ.

O Manase 99

ಸೆಂಚುರಿಗೆ ಮುಂಚೆ ಒಂದು ಭರ್ಜರಿ ಸಿಕ್ಸರ್ Nervous Nineties. ಇದು ಕ್ರಿಕೆಟ್ ಆಟದಲ್ಲಿ ಬಳಕೆಯಲ್ಲಿರುವ ಪದ. 99 ರನ್ ಹೊಡೆದ ಆಟಗಾರನನ್ನು ಸಾಮಾನ್ಯವಾಗಿ ಈ ಭೀತಿ ಕಾಡುತ್ತದೆ. ಸೆಂಚುರಿ ಹೊಡೆಯಬೇಕು ಅನ್ನುವ ಬಯಕೆ ಮತ್ತು ಒತ್ತಡಗಳಿಗೆ ಸಿಲುಕಿ ಆತ ಔಟ್ ಆಗುತ್ತಾನೆ. ನಿಮ್ಮ ಮೆಚ್ಚಿನ ಓ ಮನಸೇ ಪತ್ರಿಕೆಗೆ ಈಗ 99. ಆದರೆ ನಮ್ಮನ್ನು ಆ ನೈಂಟೀಸ್ ನರ್ವಸ್ ಕಾಡಿಲ್ಲ, ಬದಲಾಗಿ ನಾಳೆಯ ಶತಕಕ್ಕೆ ಒಂದು ಅದ್ಭುತ ಮುನ್ನುಡಿಯಂತೆ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಈ ಬಾರಿಯ ವಿಜಯದಶಮಿ ಹಬ್ಬಕ್ಕೆ ನಮ್ಮ ಓದುಗರಿಗೆ ಈ ಸಂಚಿಕೆ ಒಂದು ಒಳ್ಳೆಯ ಗಿಫ್ಟ್. ನಾಳೆಯೇ ನಿಮ್ಮ ಮನೆಪಕ್ಕದ ಅಂಗಡಿಯಲ್ಲಿ ವಿಚಾರಿಸಿ. ಪ್ರೀತಿ ಮಾಡಬಾರದು... ...ಆದರೆ ಜಗಕೆ ಹೆದರಬಾರದು ಅಂದರು ಹಂಸಲೇಖಾ. ಆದರೆ ನಮ್ಮದು ಉಪೇಂದ್ರರ ಥಿಯರಿ. ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದನೆಕಾಯಿ ಅಂತೀವಿ ನಾವು. ಹಠಕ್ಕೆ ಬಿದ್ದು ಲವ್ ಮಾಡೋದು, ಮೋಸ ಹೋದೆ ಎಂದು ಗೋಳಿಡುವುದು, ಮತ್ತೆ ಐ ಲವ್ ಯೂ ಎಂದು ಊಳಿಡುವುದು, ಇವೆಲ್ಲ ಒಂದು ಚಟ. ಲವ್ ಮಾಡಲೇಬೇಕು ಎಂದು ಶಪಥ ಮಾಡಿದ್ರೆ ನಿಮ್ಮನ್ನು ನೀವೇ ಪ್ರೀತಿಸಿ. ಆಗ ಬೇರೆಯವರೂ ನಿಮ್ಮನ್ನು ಪ್ರೀತಿಸುತ್ತಾರೆ. ಈ ಫಿಲಾಸಫಿ ಅರ್ಥ ಆಗಬೇಕಾದರೆ ಈ ಲೇಖನ ಓದಲೇಬೇಕಾಗುತ್ತದೆ. ಬ್ರಹ್ಮಚಾರಿಯ ಬ್ರಹ್ಮಾನಂದ... ನಮ್ಮ ಪ್ರಧಾನಿ ಮೋದಿ ಬ್ರಹ್ಮಚಾರಿ. ರಾಹುಲ್ ಗಾಂಧಿ, ಸಲ್ನಾನ್ ಖಾನ್ ಕೂಡಾ ಬ್ರಹ್ಮಚಾರಿಗಳೇ. ಬ್ರಹ್ಮಚಾರಿಗಳು ತಪ್ಪು ಮಾಡಿದ್ರೆ ಕ್ಷಮೆ ಇದೆ, ಮತ್ತೆ ತಪ್ಪು ಮಾಡುವುದಕ್ಕೆ ಲೈಸೆನ್ಸೂ ಇದೆ. ಗೆಳೆಯರಿಗೋಸ್ಕರ ಜೀವ ಬಿಡುವ ಬ್ಯಾಚುಲರ್ ಎಂಬ ಈ ಅಬ್ಬೇಪಾರಿ ಲೋಫರ್ ಗಳ ಲೈಫ್ ಸ್ಟೈಲ್ ಕಡೆಗೆ ನಾವು ಟಾರ್ಚ್ ಬಿಟ್ಟಿದ್ದೇವೆ. ಇವರಿಗೆ ಹೇಳೋರಿಲ್ಲ, ಕೇಳೋರಿಲ್ಲ. ಆದರೆ ಇವರಿಲ್ಲದಿದ್ದರೆ ದೇಶಕ್ಕೆ ನೆಮ್ಮೆದಿಯೇ ಇಲ್ಲ. ಅವಳು ಜೀವದ ಗೆಳತಿ, ಈಗ ಅವಳೇ ನನ್ನ ಸವತಿ ಇದೊಂದು ನಂಬಿಕೆದ್ರೋಹದ ಕತೆ. ಜೀವ ಕೊಡ್ತೀನಿ ಅಂದಿದ್ದ ಗೆಳತಿ ಈಗ ತನ್ನ ಬದುಕನ್ನೇ ನಾಶ ಮಾಡೋದಕ್ಕೆ ಹೊರಟಿದ್ದಾಳೆ, ಅವಳು ಮಾಡಿದ ಕೆಲಸಕ್ಕೆ ಅವಳನ್ನೇ ಕೊಂದೇಬಿಡಬೇಕು ಅನಿಸ್ತಿದೆ. ಹಾಗಂತ ಆಕ್ರೋಶದಲ್ಲಿ ಬೇಯುತ್ತಿರುವ ಗೃಹಿಣಿಗೆ ರವಿ ಬೆಳಗೆರೆ ‘ಸಮಾಧಾನ’ ಹೇಳಿದ್ದಾರೆ. ಅದನ್ನು ಓದಿದರೆ ಅವಳಷ್ಟೇ ಅಲ್ಲ, ನೀವೂ ಕರಗಿಹೋಗಬೇಕು. ಏನದು? ಒಂದ್ಸಾರಿ ಓದಿದರೆ ಗೊತ್ತಾಗುತ್ತದೆ. ಕಾಲವೆಂಬುದು ಗಿರಗಿರ ತಿರುಗುವ ಬುಗುರಿ ಅಮರಕೃತಿಗಳನ್ನು ರಚಿಸಿದವರೆಲ್ಲರೂ ಮಹಾತ್ಮರಲ್ಲ, ಅವರೊಳಗೆ ಅಸಹ್ಯಕರವಾದ ಚಿಂತನೆಯೂ ಇರುತ್ತದೆ. ಇಂಥಾ ದೊಡ್ಡವರ ಸಣ್ಣತನಗಳನ್ನು ತಮ್ಮ ನೆನಪಿನಂಗಳದಿಂದ ಹೆಕ್ಕಿ ನಿಮ್ಮ ಮುಂದೆ ಇರಿಸಿದ್ದಾರೆ ರವಿ ಬೆಳಗೆರೆ. ಓದಿದರೆ ಬೆಚ್ಚಿಬೀಳುತ್ತೀರಿ, ನಕ್ಕು ನಲಿಯುತ್ತೀರಿ ಕೂಡಾ. ಅದು ‘ಮನಸಿನ್ಯಾಗಿನ ಮಾತು’. ಹೆಂಡತಿಯೆಂದರೆ ಹೀಗಿರಬೇಕು... ದ್ವಿಪದಿ, ತ್ರಿಪದಿ, ಚೌಪದಿ, ದ್ರೌಪದಿ....ಪ್ರಾಸವೇನೋ ಚೆನ್ನಾಗಿದೆ. ಆದರೆ ಮಹಾಭಾರತದಲ್ಲಿ ಪಾಂಡವರ ಶೌರ್ಯದ ಗುಣಗಾನವಿದೆಯೇ ಹೊರತು ಪಂಚಗಂಡರ ಜೊತೆ ಅಸಹಜ ದಾಂಪತ್ಯ ನಡೆಸಿದ ದ್ರೌಪದಿಯ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ. ಬನ್ನಿ ದ್ರೌಪದಿಯ ವ್ಯಥೆಯ ಕತೆ ಓದೋಣ. ಬಡವರ ಮನೆಯ ತೆಳಿಗಂಜಿಗೆ ಮೃಷ್ಟಾನ್ನದ್ದೇ ರುಚಿ ದನ ಗಂಜಿ ಹೀರುವಾಗ ಮಾಡುವ ಸುರ್ರ್ ಎಂಬ ಸದ್ದನ್ನು ತುಳುವಿನಲ್ಲಿ ಸುರ್ಪ್ ಅಂತಾರೆ. ಅದೇ ಸದ್ದು ಮನುಷ್ಯರು ಮಾಡಿದರೆ ಬ್ರಿಟಿಷರು ಸ್ಲರ್ಪ್ ಅಂತಾರೆ. ಯಾರ ಕಡೆಯಿಂದ ಯಾರು ಈ ಪದವನ್ನು ಎರವಲು ಪಡೆದರು? ಇಂಥಾ ಪದಪ್ರಯೋಗಗಳ ಮೂಲ ಹುಡುಕುವ ಪ್ರಯತ್ನವೇ ವಾಗರ್ಥ ಚೂಡಾಮಣಿ. ಇದು ಈ ಸಂಚಿಕೆಯಿಂದ ಶುರುವಾಗುತ್ತಿರುವ ಹೊಸ ಅಂಕಣ. ಐಸ್ ಕ್ರೀಮ್ ತಿಂದಾಗ ತಲೆನೋವು ಬರುತ್ತಿದೆಯೇ? ‘ಸೈನ್ಸ್ ಪೇಜ’ಲ್ಲಿದೆ ಉತ್ತರ. ‘ಖಾಲಿಜೇಬು ರ್ಯಾಲಿ ಸೈಕಲ್’ ಕಾಲಂನಲ್ಲೊಂದು ಮರ್ಡರ್, ಇದು ‘ಜಾನಕಿ’ಯ ಕೈವಾಡ! ಮದುವೆಗೆ ಮುಂಚೆ ಪ್ರಾಕ್ಟಿಕಲ್ ಆಗಿದ್ದ ಹುಡುಗೀರು ಮದುವೆಯಾದ ತಕ್ಷಣ ಯಾಕೆ ಎಮೋಷನಲ್ ಆಗುತ್ತಾರೆ?. ಜಮುನಾರಾಣಿ ಬಳಿ ಉತ್ತರವಿದೆ. ಪರಮಾತ್ಮನಿಗೆ ಪ್ರಿಯವಾದ ದಾನ ಯಾವುದು? ‘ಆಚಾರ ವಿಚಾರ’ದಲ್ಲಿ ಮಾಹಿತಿಯಿದೆ. ಅಮೃತಾ ಮತ್ತು ಇಮ್ರೋಜ್ ಪ್ರೇಮಕತೆಯ ನಾಲ್ಕನೇ ಅಧ್ಯಾಯ ‘ರಾಜಧಾನಿ ಮೇಲ್’ ಅಂಕಣದಲ್ಲಿ. ‘ಒಂದು ಸೀಳಿನ ಫೋಟೋ ಹಾಕಿದ್ದಕ್ಕೆ ಚೇಳು ಕಡಿದಂತೆ ಆಡುವುದು ಹೆಣ ಕೊಯ್ಯುವವನಿಗೆ ಗಿಡ ಕೊಯ್ಯುವಾಗ ಮೈ ಬೆವರಿದಂತೆ’ ಎಂದು ಗೇಲಿ ಮಾಡಿ ಪಕಪಕಾಂತ ನಕ್ಕಿದ್ದಾರೆ ಮಹಾಶ್ವೇತ - ಈ ಅಂಕಣ ಪಡುಕೋಣೆಯೊಳಗೆ ಇಣುಕಿ ನೋಡುವವರಿಗೆ ಮಾತ್ರ. ಯಾರವಳು ಹಾಫ್ ಗರ್ಲ್ ಫ್ರೆಂಡ್? ಈ ಅನ್ವೇಷಣೆಯ ಕಾಪಿ ರೈಟ್ ನಮ್ಮದು. ಹೊಸ ಆಪಲ್ ಫೋನ್ ಒಳಗೆ ಏನೈತಿ ಅಂಥಾದ್ದೇನೈತಿ? ‘ವಾಟ್ಸಾಪ್’ ಓದಿ. ರೀಡರ್ಸ್ ಡೈಜೆಸ್ಟ್ ಕಾಲಂನಲ್ಲಿ ಶಕೀಲಾ ಆತ್ಮಕತೆಯ ಒಂದು ಭಾಗ. ಫೋಟೋ ಪೇಜಲ್ಲಿ ಹಾಲುಗಲ್ಲದ ಮಕ್ಕಳ ಕಿಲಕಿಲಾ. ಈ ಬಾರಿ ಹಬ್ಬಕ್ಕೆ ಇಷ್ಟು ಸಾಕಲ್ವ? ನೆನಪಿರಲಿ ಜಾಸ್ತಿ ತಿಂದರೆ ಹೊಟ್ಟೆಗೆ ಅಜೀರ್ಣವಾಗುತ್ತದೆ, ಆದರೆ ಜಾಸ್ತಿ ಓದಿದರೆ ಮಿದುಳಿನ ಜೀರ್ಣಶಕ್ತಿ ಜಾಸ್ತಿಯಾಗುತ್ತದೆ.

O Manase- 98


ಈಗಷ್ಟೇ ನಿದ್ದೆಯಿಂದ ಎದ್ದ ಮಗು ನಕ್ಕ ಹಾಗೆ ‘ಓ ಮನಸೇ..’ ಯ 98ನೇ ಸಂಚಿಕೆ ಕೊಂಚ ತಡವಾಗಿ ಮಾರುಕಟ್ಟೆಗೆ ಬರುತ್ತಿದೆ. ಮತ್ತದೇ ಹಳೇ ಕಾರಣಗಳನ್ನು ಹೇಳುವುದಕ್ಕೆ ಮನಸ್ಸಾಗುತ್ತಿಲ್ಲ. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಪ್ರಾಮಿಸ್ ಮಾಡಿದರೂ ನಿಮ್ಮ ಮುನಿಸು ಕಡಿಮೆಯಾಗಲಾರದು ಅನ್ನುವುದು ಗೊತ್ತಿದೆ. ಆದರೂ ಓದುಗ ದೊರೆಯ ಮುಂದೆ ಇದೊಂದು ಸಾರಿ ಕ್ಷಮಿಸಯ್ಯಾ ಗುರುವೇ ಎಂದು ಕೇಳುವುದಕ್ಕೆ ನಮಗೇನೂ ಸಂಕೋಚ ಇಲ್ಲ. ನಿದಿರೆಗೆ ರಜ, ಬದುಕಿಗೆ ಸಜ ಆಹಾರ, ನಿದ್ರೆ, ಭಯ, ಮೈಥುನ – ಈ ನಾಲ್ಕು ಗುಣಗಳೇ ಮನುಷ್ಯನ ಮೂಲಭೂತ ಪ್ರವೃತ್ತಿಗಳು ಅನ್ನುವ ಕಾಲ ಹೊರಟುಹೋಯಿತು. ಈಗ ಜನರು ಆಧುನಿಕ ಬದುಕಿನ ಸವಲತ್ತಿಗಾಗಿ ಈ ನಾಲ್ಕನ್ನೂ ತೊರೆಯುವುದಕ್ಕೆ ಸಿದ್ಧರಾಗಿದ್ದಾರೆ. ನಿದ್ರೆಗಾಗಿ ಹಂಬಲಿಸುವುವವರು ಮತ್ತು ನಿದ್ದೆಯನ್ನು ಒದ್ದು ಓಡಾಡುವವರು ಇವೆರಡೇ ಕೆಟಗರಿಯ ಜನರು ತುಂಬಿರುವ ಈ ಕಾಲದಲ್ಲಿ ನಿಮಗೆಷ್ಟು ನಿದ್ದೆ ಬೇಕು ಎಂದು ಕೇಳುವುದು ತಮಾಷೆ ಅನಿಸಬಹುದು. ಆದರೆ ನಿದ್ರೆ ಗಾಯಬ್ ಆದರೆ ಎಂಥಾ ಆನಾಹುತಗಳಾಗುತ್ತವೆ ಅನ್ನುವುದನ್ನು ನೇವಿ ಪತ್ತೆ ಮಾಡಿದ್ದಾರೆ. ಇದನ್ನು ಓದುತ್ತಾ ನಿಮಗೆ ನಿದ್ದೆ ಬಂದರೆ ನಮ್ಮ ಶ್ರಮ ಸಾರ್ಥಕ! ಸ್ಮೈಲ್ ಪ್ಲೀಸ್ ಅವಳ ಪ್ರೀತಿ ಸಂಪಾದಿಸುವುದು ಹೇಗೆ? ಯಾವ ಅಪ್ಲಿಕೇಷನ್ನೂ ಹಾಕಬೇಕಾಗಿಲ್ಲ, ಯಾವ ಕೋರ್ಸೂ ಮಾಡಬೇಕಾಗಿಲ್ಲ. ಸುಮ್ನೇ ನಗಬೇಕು ಅಷ್ಟೆ. ನಗ್ತಾ ಇರಿ, ನಗಿಸ್ತಾ ಇರಿ ಅನ್ನುವುದು ಒನ್ ಪಾಯಿಂಟ್ ಅಜೆಂಡಾ. ನಕ್ಕವರ ಬದುಕು ಹಸನಾಗಿರುವ ಬಗ್ಗೆ ಕತೆ ಹೇಳುತ್ತಾರೆ ಜೋಶೀಲಾ. ಸದಾ ನಗುತ್ತಾ ಇರುವವರು ಹುಡುಗೀರಿಗೆ ಯಾಕೆ ಇಷ್ಟ ಆಗುತ್ತಾರೆ ಅನ್ನುವ ಬಗ್ಗೆಯೂ ಇಲ್ಲೊಂದು ಒಳನೋಟವಿದೆ. ನಗುನಗುತ್ತಾ ಓದಿ. ಸಕಲರ ಪ್ರೀತಿಪಾತ್ರರಾಗಿ. ಆಹಾ ಎಂಥ ಮಧುರ ಯಾತನೆ... ಸೋಮವಾರ ಸಂತೆ, ಶನಿವಾರ ಸಂತೆ ಇದ್ದಹಾಗೆ ಈಗ ಹಾಡುಗಳ ಸಂತೆ ವಾರಪೂರ್ತಿ ಭರ್ಜರಿಯಾಗಿ ನಡೆಯುತ್ತಿದೆ. ಕಿವಿಯೊಳಗೆ ವೈರು ತೂರಿಸಿಕೊಂಡು ಕನಸಲ್ಲಿ ನಡೆಯುವಂತೆ ಓಡಾಡುವ ಹುಡುಗ-ಹುಡುಗಿಯರು ರಸ್ತೆಯುದ್ದಕ್ಕೂ ಕಾಣಿಸುತ್ತಾರೆ. ಅಂಥಾದ್ದೇನಿದೆ ಈ ಸಂಗೀತದಲ್ಲಿ? ಹಾಡುಗಳ ಜಗತ್ತಿನಲ್ಲಿ ಅಲೆದಾಡುತ್ತಿರುವ ಮುಸಾಫಿರ್ ಬರೆದ ಲೇಖನವೊಂದು ಭಾವಲಹರಿಯಾಗಿ ಹರಿದಾಡುತ್ತಿದೆ ಇಲ್ಲಿ. ಸ್ವಲ್ಪ ಸೌಂಡ್ ಜಾಸ್ತಿ ಮಾಡಿ ಕೇಳಬಹುದಾದ ಹಾಡುಗಳ ಪಟ್ಟಿಯೂ ಇದರೊಳಗೆ ಅಡಕವಾಗಿದೆ. ಹಬ್ಬ ಮಾಡೋಣ ಬನ್ನಿ ಹಬ್ಬಗಳ ಸೀಸನ್ ಮುಗಿದುಹೋಗಿದೆ. ಗಣೇಶ ಕೆರೆಯಂಗಳದಲ್ಲಿ ಅನಾಥವಾಗಿ ಮಲಗಿದ್ದಾನೆ. ಗೌರಿ ತವರಿನಿಂದ ವಾಪಸ್ ಬಂದಿದ್ದಾಳೆ. ವರಮಹಾಲಕ್ಷ್ಮಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಳೆ. ಯುಗಾದಿ, ದೀಪಾವಳಿಗೆ ರೆಡಿಯಾಗಬೇಕು. ಹಬ್ಬಗಳು ಅಂದರೆ ನಮ್ಮ ಪಾಲಿಗೆ ಭಾವವೋ, ಭಕುತಿಯೋ, ನೆನಪಿನಂಗಳದಿಂದ ಎದ್ದುಬಂದ ಗರಿಕೆಹುಲ್ಲಿನಂಥ ಅನುಭೂತಿಯೋ ಗೊತ್ತಿಲ್ಲ. ನಿಮಗ್ಯಾವ ಹಬ್ಬ ಇಷ್ಟ ಎಂದು ನಾವು ಕೇಳಿದ ಪ್ರಶ್ನೆಗೆ ಓದುಗರು ನೀಡಿದ ಉತ್ತರಗಳನ್ನು ಓದಿದರೆ ಸ್ವಲ್ಪ ಸುಳಿವು ಸಿಗಬಹುದು. ಅತಿಹೆಚ್ಚು ಓದುಗರು ಮೆಚ್ಚಿದ ಹಬ್ಬ ಯಾವುದು? ನಾವು ಹೇಳೋಲ್ಲ, ಓದಿ ತಿಳಿಯಿರಿ. ಪರಿಸ್ಥಿತಿ ಕೊಟ್ಟ FOURCE, ದೇವರು ಕೊಟ್ಟ source ಅವರು ಪ್ರೇಮಕವಿ, ಮನಸ್ಸಿನ ಬಗ್ಗೆ ಭಯಂಕರ ಸಂಶೋಧನೆ ಮಾಡಿ ಒಂದು ಹಾಡಲ್ಲಿ ನೂರಾ ಹದಿನಾಲ್ಕು ಸಾರಿ ಮನಸ್ಸನ್ನು ಜಪಿಸಿದವರು. ‘ಚಂದ್ರಮುಖಿ ಪ್ರಾಣಸಖಿ’ ಚಿತ್ರವನ್ನು ಸಂಗೀತದಲ್ಲೇ ಅದ್ದಿ ತೆಗೆದವರು. ರತ್ನಕೋಶದಲ್ಲೂ ಸಿಗದೇ ಇರುವ ಕನ್ನಡ ಪದಗಳನ್ನು ಹಾಡಲ್ಲಿ ಪ್ರಯೋಗಿಸಿದವರು. ಶುಭ್ರ ಮನಸ್ಸು, ಶುದ್ಧ ಸಾಹಿತ್ಯ, ಸದ್ದಿರದ ಸಂಗೀತ. ‘ನಾನು ನನ್ನಿಷ್ಟ’ ಕಾಲಂನಲ್ಲಿ ಕಲ್ಯಾಣ ರಾಗ ಕೇಳಿ. ‘ಓ ಮನಸೇ’ ಯ ಮೆನು ಇಲ್ಲಿಗೇ ಮುಗಿಯುವುದಿಲ್ಲ. ನಿಮ್ಮ ಮನವ ಸಂತೈಸುವುದಕ್ಕೆ ‘ಸಮಾಧಾನ’ ಇದೆ, ‘ವಾಟ್ಸ್ ಅಪ್’ ಕಾಲಂನಲ್ಲಿ ನಿಮ್ಮ ಅಪ್ಪಣೆಯನ್ನು ಪಾಲಿಸುವ ಗಡಿಯಾರದ ವಿವರಗಳಿವೆ, ದೇವಲೋಕದ ಅಪ್ಸರೆ ಊರ್ವಶಿಯ ಪ್ರೇಮಹಗರಣದ ಬಗ್ಗೆ ‘ಆಚಾರ ವಿಚಾರ’ದಲ್ಲಿ ವಿಚಾರಣೆಯಿದೆ, ಲೈಫನ್ನೇ ಓಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿರುವ ಜನರ ಬಗ್ಗೆ ‘ಇದ್ದದ್ದು ಇದ್ಹಾಂಗೆ’ಯಲ್ಲಿ ಮಹಾಶ್ವೇತಾ ಕುಟುಕು ಕಾರ್ಯಾಚರಣೆ ನಡೆಸಿದ್ದಾರೆ, ಮೈಂಡ್ ಟ್ರೀ ಸಂಸ್ಥೆಯ ಸಂಸ್ಥಾಪಕರ ಜೀವನಚರಿತ್ರೆ ‘ಜಗವ ಚುಂಬಿಸು’ ಬಗ್ಗೆ ಪುಟ್ಟ ವಿಮರ್ಶೆಯಿದೆ, ಬಡ್ಡಿ ಮಕ್ಕಳನ್ನು ಕಟಕಟೆಗೆ ತರುವ ವಿಧಾನಗಳ ಬಗ್ಗೆ ‘ಲಾ ಪಾಯಿಂಟ’ಲ್ಲಿ ಸಲಹೆಗಳಿವೆ, ಚಿಟ್ಟೆಯ ಹೋರಾಟದ ಬದುಕಲ್ಲಿ ‘ಚೈತನ್ಯದ ಚಿಲುಮೆ’ಯನ್ನು ಗುರುತಿಸಿದ್ದಾರೆ ಗುಣಮುಖ.... ಮಳೆ-ಬಿಸಿಲು ಕಣ್ಣಾಮುಚ್ಚಾಲೆ ಆಟವಾಡುತ್ತಿವೆ. ಗ್ಯಾಪಲ್ಲಿ ಕಾಮನಬಿಲ್ಲಿನಂತೆ ಬಂದಿದೆ ‘ಓ ಮನಸೇ..’. ಡೋಂಟ್ ಮಿಸ್ ಅನ್ನೋದು ಬಾಟಮ್ ಲೈನು. ಓ ಮನಸೇ ಹೈಲೇಟ್ಸ್ ಇನ್ ವೀಡಿಯೋ... https://www.youtube.com/watch?v=Ch1vdkqxgQQ
O Manase- 97

O Manase - Read on ipad, iphone, smart phone and tablets

ಓದುಗರಿಗೆ ಈ ಸಾರಿ ಸಮಾಧಾನದ್ದೇ ಸಮಾರಾಧನೆ. ಅಷ್ಟೇ ಅಲ್ಲ. ಮಳೆಯ ಹಬ್ಬ ಮತ್ತು ಹಬ್ಬದ ಮಳೆ - ಇವೆರಡೂ ಏಕಕಾಲದಲ್ಲಿ ಸಂಭವಿಸುವ ಶ್ರಾವಣದ ವಿಸ್ಮಯದ ಬಗ್ಗೆ ಪದ್ಯದಂಥ ಗದ್ಯ ಬರೆದಿದ್ದಾರೆ ನೇವಿ. ಟೈಟಲ್ಲೇ ‘ಮಳೆ ಹಬ್ಬ’. ಶಂಕರ್ ನಾಗ್ ಮೀಮ್, ಅಯ್ಯಪ್ಪ ಮೀಮ್, ಅಣ್ಣಾವ್ರ ಮೀಮ್, ಹೀಗೆ ನಮ್ಮ ಮಿದುಳನ್ನು ಏಕಾಏಕಿ ಆವರಿಸುವ ‘ಮೀಮ್ ಎಂಬ ಮಿದುಳ ಹುಳ’ದ ಬಗ್ಗೆ ನಾಗೇಶ್ ಹೆಗಡೆ ಸೊಗಸಾಗಿ ವಿವರಿಸಿದ್ದಾರೆ. ಆಕೆ ಸುಮ್ಮನೇ ತಬ್ಬಿ ಮಲಗುತ್ತಾಳೆ. ಅದಕ್ಕೆ ಗಂಟೆಗೆ ಅರುವತ್ತು ಡಾಲರ್ ಚಾರ್ಜ್ ಮಾಡುತ್ತಾಳೆ. ಯಾರವಳು? ಈ ತಬ್ಬುವಿಕೆಯಿಂದ ನಿಮಗೆ ಸಿಗುವ ಲಾಭವಾದರೂ ಏನು? ರವಿ ಬೆಳಗೆರೆ ವಿವರಿಸುತ್ತಾರೆ. ನೋವೇ ಅನಾರೋಗ್ಯ, ಸಂತೋಷವೇ ಆರೋಗ್ಯ ಎಂಬ ವೇದವಾಕ್ಯದೊಂದಿಗೆ ‘ಚೈತನ್ಯದ ಚಿಲುಮೆ’ ಎಂಬ ಹೊಸ ಅಂಕಣ ಶುರುವಾಗಿದೆ. ಇದು ನಿಮ್ಮ ಮನಸ್ಸಿಗೊಂದು ಟಾನಿಕ್ ಆಗಬಹುದು. ವೆಂಕಟೇಶ್ವರ ಸುಪ್ರಭಾತದಲ್ಲಿ ‘ಕಮಲಾಕುಚ’ ಎಂಬ ಪದ ಯಾಕೆ ಬಂತು? ‘ಆಚಾರ ವಿಚಾರ’ ಓದಿರಿ. ಫೇಸ್ ಬುಕ್ಕಲ್ಲಿ ನಡೆಯುತ್ತಿರುವ ಲೆಫ್ಟ್ ರೈಟು ಎಂಬ ಫೈಟನ್ನು ಯಾರೂ ಗೆಲ್ಲದ ಧರ್ಮಯುದ್ಧ ಎಂದು ಬಣ್ಣಿಸುತ್ತಾರೆ ಮಹಾಶ್ವೇತ. ಕೇವಲ ಹದಿನಾಲ್ಕು ಸಾವಿರಕ್ಕೆ ಒಂದು ಅದ್ಭುತ ಮೊಬೈಲ್ ಸಿಗುತ್ತದೆ ಗೊತ್ತಾ? ವಾಟ್ಸ್ ಅಪ್ ಅಂಕಣ ನೋಡಿ. ಇದರ ಜೊತೆ ನಿಮ್ಮ ಮೆಚ್ಚಿನ ಇತರೇ ಅಂಕಣಗಳೂ ‘ಓ ಮನಸೇ’ಯನ್ನು ಅಲಂಕರಿಸಿವೆ. ಓ ಮನಸೇ ಓದಿ ನಿಮ್ಮ ಮನಸ್ಸು ಅರಳಲಿ, ಜ್ಞಾನದಿಗಂತ ವಿಸ್ತರಿಸಲಿ. ಪೂರ್ತಿ ಸಂಚಿಕೆಯ ಹೈಲೈಟ್ಶ್ ನೋಡಲು ಕ್ಲಿಕ್ ಮಾಡಿ... https://www.youtube.com/watch?v=muwCZRQEhhU


O Manase


O Manase - Read on ipad, iphone, smart phone and tablets
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ಇದು ಪತ್ರ ಸಂಚಿಕೆ, ಮಿತ್ರರ ಸಂಚಿಕೆಯೂ ಹೌದು. ಮಿತ್ರರು ತಮ್ಮ ಮೈತ್ರಿಯ ಬಗ್ಗೆ ಪತ್ರಗಳನ್ನು ಬರೆದಿದ್ದಾರೆ, ಜೀವದ ಗೆಳೆಯರ ಜೊತೆ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆ ಕಾರಣಕ್ಕೆ ‘ಓ ಮನಸೇ..’ ಯ 96ನೇ ಸಂಚಿಕೆ ವಿಶೇಷ ಮತ್ತು ವಿಶಿಷ್ಟ. ಬರೀ ಪತ್ರಗಳಷ್ಟೇ ಅಲ್ಲ, ಈ ಸಂಚಿಕೆಯಲ್ಲಿರುವ ಪ್ರತಿಯೊಂದು ಬರಹವೂ ಸ್ನೇಹಕ್ಕೆ ಸಂಬಂಧಿಸಿದ್ದೇ. ಅಂಥಾ ಲೇಖನಗಳ ಕೆಲವೊಂದು ಸ್ಯಾಂಪಲ್ಲುಗಳು ಇಲ್ಲಿವೆಃ ತೆರೆಯ ಮೇಲೆ ಕುಚಿಕೂ ಕುಚಿಕೂ ಎಂದು ಅಪ್ಪಿಕೊಂಡು ಕುಣಿದಾಡುವ ಗೆಳೆಯರು ನಿಜಜೀವನದಲ್ಲಿ ಹೇಗಿರುತ್ತಾರೆ ಅನ್ನುವುದನ್ನು ‘ಬೆಳ್ಳಿತೆರೆಯ ಆಪ್ತಮಿತ್ರರು’ ಲೇಖನದಲ್ಲಿ ಚೇತು ಪತ್ತೆ ಹಚ್ಚಿದ್ದಾರೆ. ಈ ಕಾಲದಲ್ಲಿ ಸ್ನೇಹಕ್ಕಿರುವ ಬಲುದೊಡ್ಡ ಸೇತುವೆಯೆಂದರೆ ಫೇಸ್ ಬುಕ್. ಆದರೆ ನಿಮ್ಮ ಅಕೌಂಟಲ್ಲಿರುವ ಸ್ನೇಹಿತರು ಬರೀ ಲೈಕ್ ಸಂಖ್ಯೆ ಹೆಚ್ಚಿಸಲು ಮಾತ್ರ ಲಾಯಕ್ಕಾ? ಫೇಸ್ ಬುಕ್ಕಲ್ಲಿರುವ ಗೆಳೆಯರು ಮನಸ್ಸೊಳಗೂ ಬರುತ್ತಾರಾ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ ನೇವಿ. ಬೆಸ್ಟ್ ಫ್ರೆಂಡ್ ಅನ್ನೋನು ದೇವರಂತೆ, ಎಲ್ಲೋ ಇದ್ದಾನೆ ಅನ್ನೋ ನಂಬಿಕೆ ಮತ್ತು ಖಾತ್ರಿಯಲ್ಲೇ ಸ್ನೇಹದ ತಂತುವೊಂದು ಉಳಿದಿರುತ್ತದೆ. ಹಾಗಾದರೆ ‘ನಿಮ್ಮ ಗೆಳೆಯ ಯಾರು’ ಎಂದು ಸವಾಲು ಹಾಕುತ್ತಾರೆ ಜಾನಕಿ. ಬೆಂಗಳೂರಲ್ಲಿ ಊರು ಬಿಟ್ಟು ಬಂದವರ ಫ್ರೆಂಡ್ಸ್ ಕ್ಲಬ್ಬುಗಳಿವೆ, ಗೊತ್ತಾ ನಿಮಗೆ? ಅದರ ಬಗ್ಗೆ ವಿವರವಾಗಿ ಬರೆಯುತ್ತಾರೆ ಮಹಾಶ್ವೇತ. ಆರು ವರ್ಷದ ತುಂಟ ಹುಡುಗ ಮತ್ತು ಹುಲಿಯ ಜೊತೆಗಿನ ಆತನ ಸಂಬಂಧದ ಬಗ್ಗೆ ‘ಬಂದನಾ ಹುಲಿರಾಯನು’ ಎಂಬ ರೋಚಕ ಸತ್ಯಕತೆ ಬರೆದಿದ್ದಾರೆ ರೋಹಿತ್ ಚಕ್ರತೀರ್ಥ. ಇದರ ಜೊತೆಗೆ ಸಂಚಿಕೆಯ ಹತ್ತುಪುಟಗಳು ತಮ್ಮ ಗೆಳೆಯರ ಬಗ್ಗೆ ಓದುಗರು ಬರೆದ ಪತ್ರಗಳಿಗೆ ಮೀಸಲಾಗಿವೆ. ಕಣ್ಣೀರ ಒಡತಿ ಶ್ರುತಿ ತನಗಿಷ್ಟವಾದ ಶ್ರುತಿ ಚಿತ್ರದ ಬಗ್ಗೆ ಹೇಳುತ್ತಾ ತಮ್ಮ ಬದುಕಿನ ಕೆಲವು ಪುಟಗಳನ್ನು ತೆರೆದಿಟ್ಟಿದ್ದಾರೆ. ಇದು ಫ್ರೆಂಡ್ಸ್ ಡೇ ಬಗ್ಗೆ ನಾವು ರೂಪಿಸಿರುವ ವಿಶೇಷ ಸಂಚಿಕೆ. ಎಲ್ಲಾ ಗೆಳೆಯ ಗೆಳತಿಯರು ಓದಲೇ ಬೇಕಾದ ಸಂಚಿಕೆ ಕೂಡಾ
O Manase 95

O Manase - Read on ipad, iphone, smart phone and tablets


ದೂರ ದೂರ ಅಲ್ಲೇ ನಿಲ್ಲಿ ನನ್ನ ದೇವರೆ.. ಸುಡುತಿದೆ ವಿರಹ ಬಯಸಿ ಸನಿಹ.... ನೀನಿದ್ದರೇನು ಹತ್ತಿರಾ, ಎಷ್ಟೊಂದು ನಡುವೆ ಅಂತರ ಎಂದು ಈಗಿನ ಪ್ರೇಮಿಗಳು ಹಾಡುವುದಿಲ್ಲ. ಅಂದರೆ ವಿರಹ ಕೂಡಾ ಮಾಡರ್ನ್ ಆಗಿ ಬದಲಾಗಿದೆಯಾ? ಒಂದು ಕಾಲಕ್ಕೆ ಪತ್ರದ ಮೂಲಕ, ಫೋನಿನ ಮೂಲಕ ಪ್ರೀತಿ ಹಂಚಿಕೊಳ್ಳುತ್ತಿದ್ದ ಪ್ರೇಮಿಗಳು ಇವತ್ತು ಚಾಟ್, ವಿಚಾಟ್, ಸೆಲ್‌ಫೋನ್‌ಗಳಿಂದ ಒಂದು ಹೊಸ ಸಂಬಂಧವನ್ನು ದೂರದಿಂದಲೇ ಕಂಡುಕೊಂಡು ಅದರಲ್ಲೊಂದು ವಿಚಿತ್ರ ಥ್ರಿಲ್ ಅನುಭವಿಸುತ್ತಾರೆ.. ಇಂಥ ದೂರದ ಸಂಬಂಧಗಳನ್ನು ಹೊಂದುವ ಹೊಸ ಜನರೇಷನ್‌ನ ಸಂಖ್ಯೆ ಹೆಚ್ಚುತ್ತಿದೆ. ದುರಾದೃಷ್ಟವಶಾತ್ ಅಂಥವುಗಳಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಸಂಬಂಧಗಳ ಸಂಖ್ಯೆ ತೀರಾ ಕಡಿಮೆ. ಅದಕ್ಕೆ ಕಾರಣವೇನು? ಮಾಡರ್ನ್ ವಿರಹದ ನೋವಿನ ಬಗ್ಗೆ ನೇವಿ ಬರೆಯುತ್ತಾರೆ ಕರುಳಿನ ಕರೆ, ಅದೆಷ್ಟು ಖರೆ! ತಲೆಯಲ್ಲಿರುವ ಮಿದುಳು ತಂದೆ , ಹೊಟ್ಟೆಯಲ್ಲಿರುವ ಕರುಳು ತಾಯಿ ಅದೆಷ್ಟೋ ಬಾರಿ ತಲೆಯಲ್ಲಿನ ಮಿದುಳಿಗಿಂತ ಹೊಟ್ಟೆಯಲ್ಲಿನ ಮಿದುಳು ಚುರುಕಾಗಿ, ತರ್ಕಕ್ಕೆ ಸಿಗದಂಥ ಕೆಲಸ ಮಾಡುತ್ತದೆ. ನಮಗೆ ಬಾಯಾರಿಕೆ ಆಗಿದೆ ಎಂಬುದಕ್ಕೆ ಏನೇನೋ ಸಂಕೇತಗಳು ಬರುತ್ತಿರುತ್ತವೆ. ಗಂಟಲು ಒಣಗುತ್ತದೆ. ಅವೆಲ್ಲ ಸಂಕೇತಗಳು ಮಿದುಳಿನಿಂದಲೇ ಬರುತ್ತವೆ. ಒಂದೊಂದೂವರೆ ಲೋಟ ನೀರು ಕುಡಿದ ಮೇಲೆ ‘ಸಾಕು’ ಎಂಬ ಸಂಕೇತ ಎಲ್ಲಿಂದ ಬರುತ್ತದೆ?. ತೃಪ್ತಿಯ ಆ ಸಂಕೇತ ನಿಮಗೆ ಮಿದುಳಿನಿಂದ ಅಲ್ಲ, ಕರುಳಿನಿಂದ ಬರುತ್ತದೆ. ‘ನವರಸ’ಗಳಿಗೆ ಬೇಕಾದ ಬಹುಪಾಲು ರಸಮೂಲಗಳೆಲ್ಲ ಕರುಳಿನ ಫ್ಯಾಕ್ಟರಿಯಲ್ಲೇ ತಯಾರಾಗುತ್ತವೆ. ಕರುಳಬಳ್ಳಿ ಸಂಬಂಧದ ಬಗ್ಗೆ ನಾಗೇಶ್ ಹೆಗಡೆ ಫಿಸಿಕಲ್ ಸೈಕಾಲಜಿ ಆಂಗಲ್‌ನಿಂದ ಬರೆಯುತ್ತಾರೆ. ದೇಶ ಸುತ್ತುವ ಹುಮ್ಮಸ್ಸು ಹುಟ್ಟಿಸುವ ವಯಸ್ಸು! ಒಬ್ಬನೇ ನಿಂತು ಈ ಮಳೆಯನ್ನು ನೋಡುವುದು, ಒಬ್ಬನೇ ಮನೆಯಲ್ಲಿ ಚಹ ಮಾಡಿ ಕುಡಿಯುವುದು, ಏಕಾಂಗಿಯಾಗಿ ಪುಸ್ತಕ ಓದುತ್ತ ಕೂರುವುದು, ದೂರದ ಬೆಟ್ಟದ ತುದಿಯಲ್ಲಿ ಒಬ್ಬನೇ ಇದ್ದು ಗಾಳಿಪಟ ಹಾರಿಸುವುದು, ಛಕ್ಕನೆ ನಿರ್ಧಾರ ಮಾಡಿ ಯಾವ ಪೂರ್ವಸಿದ್ಧತೆ ಇಲ್ಲದೆ ಒಬ್ಬನೇ ಗೊತ್ತಿಲ್ಲದ ಊರಿಗೆ ಪ್ರವಾಸ ಹೊರಡುವುದು -ಇವೆಲ್ಲ ಆತ್ಮಶೋಧನೆಯ ಮಾರ್ಗಗಳು. ಹಾಗನ್ನುವ ಅಪ್ಪ ತನ್ನ ಮಗನಿಗೆ ಗೊತ್ತಿಲ್ಲದ ಊರಿಗೆ ಮ್ಯಾಪಿಲ್ಲದೆ ಹೋಗುವ ಹಾದಿಯನ್ನು ಹೇಳಿಕೊಡುತ್ತಾನೆ. ಇದು ಈ ಬಾರಿಯ ಅಪ್ಪನ ಪತ್ರದ ವಿಶೇಷ ಎಲ್ಲೆಲ್ಲೂ ಸಂಗೀತವೇ.. ಹಳೆಯ ಹಾಡು ಕೇಳಲು ಬಂದಿದೆ ಹೊಸ ಎಂಪಿತ್ರೀ ಪ್ಲೇಯರ್! ಓದಿ ವಾಟ್ಸ್ ಅಪ್ ಕಾಲಂನಲ್ಲಿ ಕಾಲವೆಂಬ ಈ ಹಕ್ಕಿ ಎಲ್ಲಿ ನಿಲ್ಲುತ್ತದೆ? ಇಲ್ಲಿ ಪ್ರತಿಯೊಂದು ದೇಹವೂ ಗಾಯಗೊಂಡಿದೆ, ದಾಹಗೊಂಡ ಆತ್ಮ, ನೋಟದಲ್ಲಿ ಗೊಂದಲ, ಮನದಲ್ಲಿ ಹತಾಶೆ. ಇದು ಮಹಾನಗರ! ದೆಹಲಿಯ ಮತ್ತೊಂದು ಮುಖದ ಅನಾವರಣ ಈ ಬಾರಿಯ ರಾಜಧಾನಿ ಮೇಲ್ ನಲ್ಲಿ. ಹೆಂಗಸರಿದ್ದಾರೆ ಎಚ್ಚರಿಕೆ! ಹಿಂದೆಲ್ಲ, ಗಂಡಸರಿದ್ದಾರೆ ಹುಷಾರು ಎಂದು ತಾಯಿ ತನ್ನ ಮಗಳಿಗೆ ಕಿವಿಮಾತು ಹೇಳುತ್ತಿದ್ದಳು. ಇಂದು ಹುಡುಗಿಯರಿದ್ದಾರೆ ಎಚ್ಚರಿಕೆ ಕಣಪ್ಪಾ ಎಂದು ಅಪ್ಪ ಮಗನಿಗೆ ಪಾಠ ಹೇಳುವ ಕಾಲ ಬಂದಿದೆ. ಇವೆಲ್ಲದರ ಜೊತೆಗೆ ಸೈನ್ಸ್ ಪೇಜ್, ಸಮಾಧಾನ, ಗುಣಮುಖ, ಲಾ ಪಾಯಿಂಟು, ಸೈಡ್ ವಿಂಗ್, ಫೇಸ್ ಬುಕ್ ಪದ್ಯಗಳು ಮೊದಲಾದ ಅಂಕಣಗಳು. ಇನ್ನೆರಡೇ ದಿನಗಳಲ್ಲಿ ಓ ಮನಸೇ ಮಾರುಕಟ್ಟೆಯಲ್ಲಿರುತ್ತದೆ. ಕಿಟಿಕಿಯಾಚೆ ಸುರಿಯುವ ಮಳೆ ನೋಡುತ್ತಾ ಓದುವ ಸುಖ ನಿಮ್ಮದಾಗಲಿ.

O Manase-94

O Manase - Read on ipad, iphone, smart phone and tablets

ಭಾವನೆಗಳ ಶರಪಂಜರದಿಂದ ಹೊರಬರುವುದು ಹೇಗೆ? ನಿಮ್ಮ ಮನಸ್ಸಿಗೆ ನೀವೇ ಟೀಚರ್ ಭಾವನೆಗೆ ಗುಡ್ ಬೈ, ಲಾಜಿಕ್ ಗೆ ಜೈ ಕಲ್ಪನಾಲೋಕದಲ್ಲಿ ಸುಖಿಸುವವನು ಕವಿ, ಅದರಿಂದ ಅವನಿಗೆ ಮತ್ತು ರಸಿಕರಿಗೆ ಲಾಭವೂ ಇದೆ. ನಮ್ಮನಿಮ್ಮಂಥ ಸಾಮಾನ್ಯರು ಭಾವನೆಗಳ ಅಡಿಯಾಳಾದರೆ ಆರೋಗ್ಯ ಕೆಟ್ಟುಹೋಗುತ್ತದೆ, ತಲೆ ಎಕ್ಕುಟ್ಟೋಗುತ್ತದೆ. ಅದರ ಬದಲು ಎಲ್ಲವನ್ನೂ ಲಾಜಿಕಲ್ ಆಗಿ ಯೋಚನೆ ಮಾಡಿ. ಅದರ ಮೂಲಕ ಜ್ಞಾನ ಸಂಪಾದನೆಯಾಗುತ್ತದೆ, ಬದುಕು ಬಂಗಾರವಾದರೂ ಆದೀತು. ಈ ಬಾರಿಯ ಓ ಮನಸೇ ಸಂಚಿಕೆಯಲ್ಲಿ ಇಂಥಾ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಒಂದು ಚಂದದ ಲೇಖನವಿದೆ. ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ಅನ್ನುವುದನ್ನು ನಾವು ಹೇಳಿಕೊಡುತ್ತೇವೆ. ಗಲಾಟೆ ಮಾಡಿದ್ರೆ ಹುಷಾರ್ ಸಮೂಹಸನ್ನಿ ಮತ್ತು ದಂಗೆಯ ದಮನ ಜನರು ಯಾಕೆ ದಂಗೆ ಏಳುತ್ತಾರೆ? ಯಾಕೆ ದೊಂಬಿ ಮಾಡುತ್ತಾರೆ? ಆ ಸಂದರ್ಭದಲ್ಲಿ ಅವರ ಮನಸ್ಸು ಯಾವ ರೀತಿ ವರ್ತಿಸುತ್ತದೆ? ಸರ್ಕಾರ ಇಂಥಾ ದಂಗೆಗಳನ್ನು ಹತ್ತಿಕ್ಕುವುದಕ್ಕೆ ಹೂಡುವ ತಂತ್ರಗಳೇನು? ಇವೆಲ್ಲದರ ಬಗ್ಗೆ ನಾಗೇಶ್ ಹೆಗಡೆ ವಿವರವಾಗಿ ಬರೆಯುತ್ತಾರೆ. ಇದು ಸೋಷಿಯಲ್ ಸೈಕಾಲಜಿ ಆಪರೇಷನ್ ಕಿಲ್ V ಗೊತ್ತು ಗೊತ್ತಿದ್ದೇ ಹಾದಿತಪ್ಪಿದ ಹುಡುಗಿಯ ಕತೆ ಶೀಲವನ್ನು ಕಳೆದುಕೊಳ್ಳುವುದು ಕೂಡಾ ಒಂದು ಟ್ರೆಂಡ್ ಆಗುತ್ತಿದೆಯಾ? ‘ನಿಲ್ಲು ನಿಲ್ಲೇ ಪತಂಗ, ಬೇಡಬೇಡ ಬೆಂಕಿಯ ಸಂಗ’ ಎಂದು ಈಗಿನ ಹುಡುಗಿಯರು ಹಾಡುವುದಿಲ್ಲ. ‘ಎಲ್ಲಿ ಜಾರಿತು ಮನವೂ..’ ಎಂಬ ಕವಿತೆಯೂ ಅವರಿಗೆ ಗೊತ್ತಿಲ್ಲ. ಶೀಲಾ ಕಿ ಜವಾನಿ ಎಲ್ಲಿ ಕಳೆದುಹೋಯಿತು ಅನ್ನುವರ ಬಗ್ಗೆಯಷ್ಟೇ ಅವರಿಗೆ ಆಸಕ್ತಿ. ಒಂದು ಸತ್ಯಕತೆಯನ್ನು ಓದಿ ಬೆಚ್ಚಿಬೀಳುವುದಕ್ಕೆ ಸಿದ್ಧರಾಗಿ ಬಾಲ್ ಅಲ್ಲ ಇದು ಕಂಪ್ಯೂಟರ್! ಕಾಣುವುದಕ್ಕೆ ಚೆಂಡಿನ ಥರ ಇದೆ, ಆದರೆ ಇದು ಒಂದು ಕಂಪ್ಯೂಟರ್. ಈಗಿರುವ ಡೆಸ್ಕ್ ಟಾಪ್ ಕಂಪ್ಯೂಟರುಗಳಿಗಿಂತ ಚಿಕ್ಕದು. ಈ ಪುಟ್ಟ ಪೆಟ್ಟಿಗೆಯೊಳಗೆ ರ್ಯಾಮ್, ಮದರ್ ಬೋರ್ಡ್, ಹಾರ್ಡ್ ಡಿಸ್ಕ್ ಎಲ್ಲವೂ ಅಚ್ಚುಕಟ್ಟಾಗಿ ಕುಳಿತಿದೆ. ಊರೂರು ಸುತ್ತುವವರಿಗೆ ಹೇಳಿ ಮಾಡಿಸಿದ ಸಾಧನವಿದು. ಖರೀದಿಗೆ ಮುಂಚೆ ಈ ಲೇಖನ ಓದಿರಿ. ಪ್ರೀತಿ ಪಾರಿಜಾತ – 2 ಅಮೃತಾ-ಇಮ್ರೋಜ್ ಪ್ರೇಮ್ ಕಹಾನಿ ಅದು ಪ್ರೀತಿಯೋ, ಆರಾಧನೆಯೋ, ಪೂಜೆಯೋ, ಭಜನೆಯೋ, ಅವರಿಬ್ಬರಿಗಷ್ಟೇ ಗೊತ್ತು. ದೇವರನ್ನು ವಿಪರೀತ ನಂಬುತ್ತಿದ್ದ ಅಮೃತಾಗೆ ಆ ದೇವರೇ ಇಮ್ರೋಜ್ ರೂಪದಲ್ಲಿ ಸಿಕ್ಕಿದ್ರಾ? ಅವೆಲ್ಲವನ್ನೂ ಇಮ್ರೋಜ್ ಬಾಯಲ್ಲೇ ಕೇಳಬೇಕು. ಕಳೆದ ಸಂಚಿಕೆಯಿಂದ ಮುಂದುವರಿದ ಭಾಗ ಇಲ್ಲಿದೆ ಮದುವೆ ಅನ್ನುವ ಹಕ್ಕು, ಕರ್ತವ್ಯ ಮತ್ತು ಅನಿವಾರ್ಯ ಕರ್ಮ ಹೆಣ್ಮಕ್ಕಳ ಮದುವೆಯಾಗದೇ ಇರುವುದು ನಿಮ್ಮ ಹಕ್ಕು ಮತ್ತು ಮದುವೆಯಾಗುವುದು ನಿಮ್ಮ ಕರ್ತವ್ಯ. ಮದುವೆಯಾಗದೇ ಮಗು ಮಾಡಿಕೊಂಡರೆ ಮಹಾಪಾಪ. ಹಾಗಂತ ಸಂವಿಧಾನದಲ್ಲಿ ಹೇಳಿಲ್ಲ. ಆದರೂ ಎಲ್ಲರೂ ಮದುವೆಯಾಗುತ್ತಾರೆ. ಮದುವೆಯೆಂಬ ಇಂಜಿನ್ ಜೊತೆ, ತಲೆನೋವೆಂಬ ಬೋಗಿಗಳು ಉಚಿತವಾಗಿ ದೊರಕುತ್ತವೆ. ವಿವಾಹಿತರ ಸಂಕಷ್ಟಗಳ ಬಗ್ಗೆ ಮಹಾಶ್ವೇತ ಭಯಂಕರ ಸಹಾನುಭೂತಿಯಿಂದ ಬರೆದ ಲೇಖನ ಓದಿ ಇವೆಲ್ಲದರ ಜೊತೆಗೆ ಸೈನ್ಸ್ ಪೇಜ್, ಸಮಾಧಾನ, ಗುಣಮುಖ, ಲಾ ಪಾಯಿಂಟು, ಸೈಡ್ ವಿಂಗ್, ಫೇಸ್ ಬುಕ್ ಪದ್ಯಗಳು ಮೊದಲಾದ ಅಂಕಣಗಳು

O Manase

O Manase - Read on ipad, iphone, smart phone and tablets
ಈ ಸರಳ ಸುಂದರಿಗೆ ನೀವು ಮರುಳಾಗಲೇಬೇಕು.. ರಜೆ ಮುಗಿದಿದೆ, ಶಾಲೆ ಶುರುವಾಗಿದೆ, ಒಂದೆರಡು ಮಳೆ ಬಿದ್ದಿದೆ, ಇದೇ ಹೊತ್ತಲ್ಲಿ ಜೊತೆಗೆ ಮದುವೆ ಸೀಸನ್ನೂ ಶುರುವಾಗಿದೆ. ಮಕ್ಕಳಿಗೆ, ದೊಡ್ಡವರಿಗೆ, ಮದುವೆಯಾದವರಿಗೆ ಮತ್ತು ಮದುವೆಯಾಗುವವರಿಗೆ ಇಷ್ಟವಾಗುವಂತೆ ಈ ಸಲದ ‘ಓ ಮನಸೇ..’ ಸಂಚಿಕೆಯನ್ನು ರೂಪಿಸಿದ್ದೇವೆ. ಮಾರುಕಟ್ಟೆಗೆ ಬಂದಿರುವ ಈ ಸಂಚಿಕೆಯ ಹೈಲೈಟ್ಸ್ ಹೀಗಿವೆಃ ಸರಸ ಸಂಸಾರಕ್ಕೆ ಸರಳ ಸೂತ್ರಗಳು- ಒಂದು ಆಧುನಿಕ ದಾಂಪತ್ಯ ಗೀತೆ. ಗಂಡಹೆಂಡತಿ ಇಬ್ಬರೂ ತಮ್ಮ ಐಡೆಂಟಿಟಿಯನ್ನು ಕಳಕೊಳ್ಳದೇ ಒಂದಾಗಿ ಬದುಕುವುದು ಹೇಗೆ? ಓದಿ ಕಲಿಯಿರಿ, ಮಾಡಿ ತಿಳಿಯಿರಿ. ಫ್ಲರ್ಟಿಂಗ್ ಜಗತ್ತಿನ ಹೊಸ ಮಂತ್ರದಂಡಗಳುಃ ವಾಟ್ಸಾಪ್, ವೀಚಾಟ್, ಟಿಂಡರ್, ಬ್ಲೆಂಡರ್.... ಕಣ್ಣಲ್ಲಿ ಪ್ರೀತಿಸೋ ಕಾಲ ಹೋಯ್ತು, ಬೆರಳಲ್ಲೇ ಲೈಕ್ ಮಾಡೋ ಕಾಲ ಬಂತು. ಹಳಿತಪ್ಪಿದರೆ ನಿಮ್ಮ ತಲೆಮೇಲೆ ನಿಮ್ಮ ಕೈ. ಒಂದು ಬಾಟಲಿಗಾಗಿ ಮಗಳನ್ನೇ ಮಾರತೊಡಗಿದ ಅಮ್ಮ ವಿಚಿತ್ರ ಸಮಸ್ಯೆ, ವಿಶಿಷ್ಟ ಸಮಾಧಾನ ಹೊಟ್ಟೆ ಅನ್ನೋದು ಬಲೂನು, ಊದಿದಷ್ಟು ದಪ್ಪವಾಗುತ್ತದೆ ಸ್ಲಿಮ್ ಅಂಡ್ ಟ್ರಿಮ್ ರವಿಬೆಳಗೆರೆಯವರ ‘ಮನಸಿನ್ಯಾಗಿನ ಮಾತು’ ಮುಂಡು ಉಟ್ಟ ಅಣ್ಣ, ಚಡ್ಡಿ ಹಾಕಿದ ತಮ್ಮ ಸೈಕಲ್ ಮೇಲೆ ಜಾನಕಿಯ ರೋಚಕ ಪಯಣ ಈ ಸಂಚಿಕೆಯಿಂದ ಶುರು ಲೈಕ್ ಒತ್ತುವವರು ನಿನ್ನ ಬದುಕಿನ ಕಷ್ಟ ಹೊರುತ್ತಾರಾ? ಫೇಸ್ ಬುಕ್ ಸಂತೆಯಲ್ಲಿ ಕಳೆದುಹೋದ ಮಗನಿಗೆ ಅಪ್ಪನ ಬುದ್ಧಿಮಾತು ಮೋದಿ ಕಂಡರೆ ಬುದ್ಧಿಜೀವಿಗಳಿಗ್ಯಾಕೆ ಆಗೋಲ್ಲ? ಒಂದು ಇನ್ವೆಸ್ಟಿಗೇಟಿವ್ ಲೇಖನ – ‘ಇದ್ದದ್ದು ಇದ್ಹಾಂಗೆ’ ಕಾಲಂನಲ್ಲಿ ಒಂದು ಕಣ್ಣು..ಮತ್ತೊಂದು ಕಣ್ಣೀರು ಅಷ್ಟೆ.. ಕಣ್ಣು ಮುಚ್ಚುವ ಮುನ್ನ ಕಣ್ತೆರೆಸುವ ಲೇಖನ - ಪೊಲೀಸ್ ಅಧಿಕಾರಿ ಬರೆದ ಸತ್ಯಕತೆ. ಚೀಪ್ ಅಂಡ್ ಬೆಸ್ಟು ಮೊಬೈಲ್ ಬಂದಿದೆ ಕೇವಲ ಏಳುಸಾವಿರ ರುಪಾಯಿಗೆ ಜಗತ್ತೇ ನಿಮ್ಮ ಕೈಯಲ್ಲಿ. ಇವೆಲ್ಲದರ ಜೊತೆಗೆ ಸೈನ್ಸ್ ಪೇಜ್, ಆಚಾರವಿಚಾರ, ಪುರಾಣಪ್ರಪಂಚ, ಗುಣಮುಖ, ಲಾ ಪಾಯಿಂಟು, ಸೈಡ್ ವಿಂಗ್, ಫೇಸ್ ಬುಕ್ ಪದ್ಯಗಳು ಮೊದಲಾದ ಅಂಕಣಗಳು.

O Manase 91

O Manase - Read on ipad, iphone, smart phone and tablets

ಆಹಾ ಮನಸೇ.. ವೈಶಾಖದ ಮೊದಲ ಮಳೆ ಇಳೆಗೆ ಬಿದ್ದಂತಿದೆ ಈ ಬಾರಿಯ ಓ ಮನಸೇ..ಯ ಘಮ. ಹಾಗಂತ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದಕ್ಕಿದೆ ಕಾರಣ. ಒಂದು ಸಾರಿ ಈ ಮೆನುವನ್ನು ಓದಿಕೊಳ್ಳಿ. ಪ್ಲಾಸ್ಟಿಕ್ ಸರ್ಜರಿ ಎಂಬ ಜಾದೂ ಸಿಲಬ್ರೆಟಿಗಳ ಸೌಂದರ್ಯದ ಹಿಂದಿನ ರಹಸ್ಯ ಪಂಚೇಂದ್ರಿಯಗಳನ್ನೂ ಬದಲಾಯಿಸಬಲ್ಲ ಮೆಡಿಕಲ್ ವಂಡರ್ ಬಗ್ಗೆ ಅಪರೂಪದ ಮಾಹಿತಿಗಳು. ಕದಿಯೋದ್ರಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಛೀ ಕಳ್ಳಿ ಅನ್ನುವಂತಿಲ್ಲ. ಯಾಕೆಂದರೆ ಅದು ಚಟ ಅಲ್ಲ, ಖಾಯಿಲೆ. ಮನೇಲೇ ಕುಳಿತು ಶಾಪಿಂಗ್ ಮಾಡಿ ಕೇಳಿದ್ದನ್ನೆಲ್ಲಾ ಕರುಣಿಸುವ ಕಂಪ್ಯೂಟರ್ ಎಂಬ ದೇವರು ಆಕೆ ನನ್ನನ್ನೇ ಹುಡುಕಿಕೊಂಡು ಬಂದಿದ್ದೇಕೆ? ಒಂದು ವಿಲಕ್ಷಣ ಮುಖಾಮುಖಿ ಬಗ್ಗೆ ರವಿ ಬೆಳಗೆರೆ ಮನಸಿನ್ಯಾಗಿನ ಮಾತಲ್ಲಿ ಬರೀತಾರೆ ನಿಮ್ಮನ್ನು ನಿಮ್ಮ ಕೆಲಸ ಮಾತ್ರ ಕಾಪಾಡುತ್ತದೆ ಆಫೀಸಲ್ಲಿ ನಿಮ್ಮ ನಡವಳಿಕೆ ಹೇಗಿರಬೇಕು? ಸರಳ ಸೂತ್ರಗಳು ಇಲ್ಲಿವೆ. ಪಬ್ಲಿಕ್ಕಲ್ಲೇ ರೋಮಾನ್ಸ್ ಮಾಡ್ತಾರೆ ಛಿ ಪ್ರೀತಿ ಇರೋದು ಪ್ರದರ್ಶನಕ್ಕಲ್ಲ ಅಂತಾರೆ ರೇಣುಕಾ ನಿಡಗುಂದಿ ಕೋವಿಯಂಥಾ ನಿರ್ದೇಶಕನ ಚಾಟಿಯಂಥಾ ಯೋಚನೆ ಹಾರರ್ ಪಿಕ್ಚರ್ ಡೈರೆಕ್ಟರ್ ರಾಮಗೋಪಾಲ್ ವರ್ಮಾನ ಸಿನಿಮಾ ಯಾನ ನೀಲಿ ಚಿತ್ರ ನೋಡಬೇಡ ಮಗಾ ಬ್ಲೂ ಬಾಯ್ಸ್ ಗೆ ಅಪ್ಪನ ಹಿತವಚನ ಸ್ಮಾರ್ಟು ಹುಡುಗರಿಗೆ ಸ್ಮಾರ್ಟು ಬೈಕು ಸಿಟಿ ರೋಡಿಗೆ ಹೇಳಿ ಮಾಡಿಸಿದ ಟೂ ವೀಲರ್ ಎರಡು ಪ್ರೇಮಪತ್ರ, ಒಂದು ನೆನಪಿನ ಚಿತ್ರ ಈ ಬಾರಿಯ ಸ್ಪೆಷಲ್. ಅಂಕಣಗಳಲ್ಲಿ ಏನೇನಿವೆ ಗೊತ್ತಾ? ‘ಪುರಾಣ ಪ್ರಪಂಚದಲ್ಲಿ’ದಲ್ಲಿ ಕೃಷ್ಣಲೀಲೆ, ‘ಲಾ ಪಾಯಿಂಟ್’ನಲ್ಲಿ ಲೋಕಾಯುಕ್ತದ ತಾಕತ್ತು, ‘ಆಚಾರ ವಿಚಾರ’ದಲ್ಲಿ ಅರಿಶಿಣ ಕುಂಕುಮದ ಸೌಭಾಗ್ಯ ಲಕ್ಷಣ, ‘ಗುಣಮುಖ’ದಲ್ಲಿ ಕಣ್ಣ ಕೆಳಗಿನ ಚೀಲಗಳ ಕತೆ, ‘ಇದ್ದದ್ದು ಇದ್ಹಾಂಗೆ’ಯಲ್ಲಿ ಬೆಂಗಳೂರೆಂಬ ಮಾಕು ಜೊತೆಗೆ ಫೋಟೋ ಪೇಜ್, ಸೈನ್ಸ್ ಪೇಜ್, ಫೇಸ್ ಬುಕ್ ಪದ್ಯಗಳು...

bottom item
’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.
ಗೆಲುವು ಎಂಬುದು ಒಂದು ಕೊನೆಯಲ್ಲ, ಒಂದು ಗೋಲ್ ಅಲ್ಲ, ಹತ್ತಿನಿಂದ ಬೆಟ್ಟವಲ್ಲ. ಅದು ನಿರಂತರವಾಗಿ ಸಾಗುತ್ತಾ ಹೋಗುವಂತಹದು. ಅದಕ್ಕೆ ಕೊನೆಯೇ ಇಲ್ಲ. ಅದಕ್ಕೆ ಕೊನೆಯೇ ಇಲ್ಲ. ಮನುಷ್ಯ ಗೆಲುವಿನಿಂದ ಗೆಲುವಿಗೆ ನಡೆಯತ್ತ ಹೋಗಬೇಕು. ಗೆದ್ದ ಮನುಷ್ಯ ಹೋಗುತ್ತಿರುತ್ತಾನೆ. ಗೆಲ್ಲಲಾಗದವನು ಅದೃಷ್ಟಕ್ಕಾಗಿ ಕಾಯುತ್ತಾ ಕೊತಿರುತ್ತಾನೆ. ಮೊದಲಿನವನು ಅಡೆತಡೆಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುತ್ತಾನೆ. ಇನ್ನೊಬ್ಬ ಎಲ್ಲಿಯೂ ತಲುಪದೆ ನಿಂತಲ್ಲೇ ಗಿರಕಿ ಹೊಡೆಯುತ್ತಿರುತ್ತಾನೆ. ಇಬ್ಬರಿಗೂ ಕೆಲವು ವ್ಯತ್ಯಾಸಗಳಿವೆ. ಅಸಾಮಾನ್ಯ ಅನ್ನಿಸಿಕೊಂಡ ಮನುಷ್ಯ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತಾನೆ., ಸಿದ್ಧನಾಗುತ್ತಿರುತ್ತಾನೆ. ಸಾಮಾನ್ಯ ಮನುಷ್ಯ ತನ್ನ ಸೇಫ್ಟಿ ನೋಡಿಕೊಂಡು ಬೆಚ್ಚಗೆ ಉಳಿದುಬಿಡುತ್ತಾನೆ.
ನೀವು ಇತಿಹಾಸವನ್ನೇ ನೋಡಿ, ಅಲ್ಲೆಲ್ಲೋ ಅಲೆ ಕ್ಝಾಂಡರ್‍ ಇದ್ದಾನೆ. ತಾಮರ್‍ಲೆನ್ ಇದ್ದಾನೆ. ಎಲ್ಲರೂ ಗೆಲುವಿನ ರುಚಿ ಕಂಡವರೆ. ಇವರೆಲ್ಲರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡಿದಾಗ, ಎಲ್ಲರಲ್ಲೂ ಕೆಲವು ಕಾಮನ್ ಕ್ವಾಲಿಟಿಗಳಿದ್ದವು. ಅನಿಸುತ್ತದೆ. ಅವರು ಬದುಕಿದ್ದ ಕಾಲ ಯವುದೇ ಇರಲಿ. ಆಗುಣಗಳು ಮಾತ್ರ ಕಾಮನ್ನಾಗಿ ಇಲ್ಲರಲ್ಲೂ ಇರುತ್ತವೆ. ಆಗುಣಗಳನ್ನು ತಕ್ಷಣ ಅರ್ಥ ಮಾಡಿಕೊಳ್ಳಿ. ಅವುಗಳನ್ನು ನಿಮ್ಮವನ್ನಾಗಿ ಮಾಡಿಕೊಳ್ಳಿ. ಗೆಲುವು ಎಂಬುದು ಆನೆಯಂತಹುದು. ಅದು ಹೋದಲ್ಲೆಲ್ಲ ಹೆಜ್ಜೆ ಗುರುತು ಬಿಟ್ಟಿರುತ್ತದೆ. ಆಜಾಡು ಗಮನಿಸಿ. ಸೋಲು ಕೂಡ ಆನೆಯಂತಹುದೇ. ಅದೂ ಹೆಜ್ಜೆ ಜಾಡು ಬಿಟ್ಟಿರುತ್ತದೆ. ಅಂಥ ಗೆಲು ಗೆದ್ದ ಬಾಬರನನ್ನು ನೋಡುತ್ತೇವೆ. ಮರು ಘಳಿಗೆಯಲ್ಲೇ ದೊಡ್ಡ ಮಟ್ಟದಲ್ಲಿ ಅಸಫಲತೆಯನ್ನು ಕಂಡ ಹುಮಾಯೂನ ನನ್ನು ನೋಡುತ್ತೇವೆ. ಹುಮಾಯೂನನ ಬಲಹೀನತೆಗಳು ಏನಿದ್ದವು ಎಂಬುದನ್ನು ತಕ್ಷಣ ತಿಳಿದುಕೊಳ್ಳಿ. ಅವುಗಳನ್ನು ಅವೈಡ್ ಮಾಡಿ. ಬಾಬರನ ಗಟ್ಟಿತನ ನಿಮ್ಮದಾಗಲಿ. ಸೋಲು ನಿಮ್ಮನ್ನು ಹೆದರಿಸುವುದಿಲ್ಲ.
ಇಷ್ಟಕ್ಕೂ ಗೆಲುವೆಂಬುದು ಬಹಳ ನಿಘೂಡತೆಯೇ ಅಲ್ಲ. ಅದರಲ್ಲಿ ರಹಸ್ಯವೆಂಬ ಮಣ್ಣಂಗಟ್ಟಿಯೂಇಲ್ಲ. ಕೆಲುವು ಮೂಲಭೂತ ಸೂತ್ರಗಳಿರುತ್ತವೆ. ಅವುಗಳನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತಾ ಹೋಗುವುದೇ ಗೆಲುವಿನ ಗುಟ್ಟು. ಸೋಲು ಕೂಡ ಅಷ್ಟೆ. ಸೋತ ಮನುಷ್ಯ ದುರದ್ರುಷ್ಟವಂತನಾಗಿರುವುದಿಲ್ಲ. ಅವನು ಪ್ರತೀಸಲ ಮಾಡಿದತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಕೆಲುವರಿಗೆ ’ಗೆಲುವು’ ಅಂದರೇನು ಎಂಬ ಬಗ್ಗೆಯೇ ಗೊಂದಲವಿರುತ್ತದೆ. ಕೆಲವರ ಮಟ್ಟಿಗೆ ದುಡ್ಡೇ ಗೆಲುವು. ದುಡ್ಡು ಸಂಪಾದಿಸಿದ ಮನುಷ್ಯನೇ ಯಶಸ್ವಿ ಮನುಷ್ಯ ಅಂದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಸಾಮಾಜಿಕ ಮನ್ನಣ್ಣೆ ಬೇಕು. ದೊಡ್ಡ ಹೆಸರು ಮಾಡಿದವರೇ ಯಶಸ್ವಿ ಪುರುಷರು ಅಂದುಕೊಳ್ಳುತ್ತಾರೆ. ಒಳ್ಳೆಯ ಆರೋಗ್ಯ, ಚೆಂದನೆಯ ಕುಟುಂಬ, ಸಮಾಧಾನ, ಸಂತೋಷ. ಮನಸ್ಸಿನ ನೆಮ್ಮದಿ ಇದ್ದರೆ ಅದೇ ಗೆಲುವು ಅಂದುಕೊಳ್ಳುತ್ತಾರೆ.  ಎಲ್ಲವೂ ನಿಜವಿರಬಹುದು. ಇವೆಲ್ಲ ಅಲ್ಲದೆ ಇನ್ನೆನ್ನೋ ಆಗಿರಲೂ ಬಹುದು. ಈ ಕ್ಷಣಕ್ಕೆ ಮಹಾನ್ ಗೆಲುವು ಅನ್ನಿಸಿದ್ದು ಮಾರನೆಯ ನಿಮಿಷಕ್ಕೆ ಏನೂ ಅಲ್ಲ ಅಂತ ಅನ್ನಿಸಿ ಬಿಡಲೂಬಹುದು ಆದರೆ ಕರಾರುವಕ್ಕಾಗಿ ಹೇಳುವುದಾದರೆ, ಗೆಲುವು ಎಂಬುದು ನಾವು ನಿರಂತರವಾಗಿ ಚೇಸ್ ಮಾಡುತ್ತಾ, ಗೆಲ್ಲುತ್ತಾ, ತಲುಪುತ್ತಾ ಹೋಗುವ ಅರ್ಥಪೂರ್ಣ ಗುರಿ.
ಹೇಳಿದೆನಲ್ಲ, ಗೆಲುವೆಂಬುದು ನಿರಂತರ ಪಯಣ. ಅಲ್ಲಿ ಖಾಯಂ ಆದ ಕೊನೆಯ ನಿಲ್ದಾಣವೆಂಬುದೇ ಇಲ್ಲ. ಅಂಥದೊಂದು ನಿಲುಗಡೆಗೆ ನಾವು ತಲುಪುವುದೂ ಇಲ್ಲ. ಒಂದು ನಿಲ್ದಾಣ ತಲುಪಿದ ಕೂಡಲೇ ಮತ್ತೊಂದು ನಿಲ್ದಾಣಕ್ಕೆ ಹೋಗಬೇಕು. ಒಂದು ನಿಲ್ದಾಣವನ್ನು ತಲುಪಿದಾಗ ಆಗುವ ಸಂತೋಷವೇ ಒಂದು ಅನುಭೂತಿ. ಅದನ್ನು ಒಳಗಿನಿಂದ ಫೀಲ್ ಮಾಡಬೇಕೇ ಹೊರತು ಬಾಹ್ಯ ಜಗತ್ತು ನಮಗೆ ಅದರ ಅನುಭವವನ್ನು ವಿವರಿಸಲಾರದು. ಹಾಗೇ ನಿಲ್ಧಾಣಗಳನ್ನು ದಾಟುತ್ತ, ದಾಟುತ್ತ ನಾವು ಹೋಗುತ್ತಿರುವುದು ಸರಿಯಾದ ಗಮ್ಯದ ಕಡೆಗೇನಾ? ಅದು ಆರೋಗ್ಯಕರ ಗಮ್ಯವೇನಾ? ಪಾಸಿಟೀವ್ ಆಗಿದೆಯಾ? ಕೇಳಿಕೊಳ್ಳಬೇಕು. ಪ್ರಯಾಣದಲ್ಲೇ ನಮಗದು ಗೊತ್ತಾಗಿ ಹೋಗುತ್ತದೆ. ಸರಿಯಾದ ದಾರಿಯಾಗಿದ್ದರೆ ನಾವಾಗಲೇ ಒಂದು ದುವ್ಯ ಅನುಭೂತಿಗೆ ಒಳಗಾಗಿರುತ್ತೇವೆ. ಅಂಥ ದಿವ್ಯಾನುಭೂತಿ ನಿಮಗೆ ಆಗದಿದ್ದರೆ, ನಿಮ್ಮ ಗೆಲುವು ನಿರರ್ಥಕ.
ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂದಮಟ್ಟಿಗೆ ಅದು ಗೆಲುವಲ್ಲ. ಒಪ್ಪಿಕೊಳ್ಳದವರೂ ಅನೇಕರಿರಬಹುದು. ಇವತ್ತಿನ ನನ್ನ ಅಛೀವ್‌ಮೆಂಟ್‌ಗಳನ್ನು ’ಆಹಾ’ ಅಂತ ಮೆಚ್ಚಿ ಹೊಗಳುವ ಮೂರ್ಖರಿಗಿಂತ, ನನ್ನ ಗೆಲುವನ್ನು ಗೆಲುವೇ ಅಲ್ಲವೆಂದು ಗೇಲಿ ಮಾಡುವ ಬುದ್ದಿವಂತರು ನನಗೆ ಇಷ್ಟವಾಗುತ್ತಾರೆ. ಆದರೆ ಗೆಲುವು ಮತ್ತು ಸಂತೋಷಗಳೆರಡೂ ಕೈ ಕೈ ಹಿಡಿದು ನಡೆಯುತ್ತವೆ. ಗೆದ್ದ ಮನುಷ್ಯನಿಗೆ, ತಾನು ಕೇವಲ ಉಸಿರಾಡುತ್ತಿಲ್ಲ: ಬದುಕಿದ್ದೇನೆ ಅಂತ ಗೊತ್ತಾಗುತ್ತಿರುತ್ತದೆ. ಅದು ಕೇವಲ ಸ್ಪರ್ಷವಲ್ಲ. ಅನುಭೂತಿ ಅನ್ನಿಸುತ್ತಿರುತ್ತದೆ. ಆತ ಯಾವುದನ್ನೂ ಸುಮ್ಮನೆ ನೋಡುವುದಿಲ್ಲ: ಗಮನಿಸುತ್ತಿರುತ್ತಾನೆ.ಕೇವಲ ಓದುವುದಿಲ್ಲ. ಓದಿದ್ದು ಆತನಲ್ಲಿ ಮಿಳಿತವಾಗುತ್ತಿರುತ್ತದೆ. ಆತ ಕೇವಲ ಕೇಳುವುದಿಲ್ಲ: ಆಲಿಸುತ್ತಿರುತ್ತಾನೆ. ಅರ್ಥ ಮಾಡಿಕೊಳ್ಳುತ್ತಿರುತ್ತಾನೆ. ಗೆಲುವೆಂದರೆ, ಇವೆಲ್ಲವುಗಳ ಸಮಾಗಮ.
ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಒಬ್ಬ ಮನುಷ್ಯ ಸೋಲುತ್ತಿದ್ದಾನೆ ಅಂದರೆ ಆತ ದುರದೃಷ್ಟವಂತ ಅನ್ನುತ್ತೀರಾ? ಖಂಡಿತ ಇಲ್ಲ. ಆತನಿಗೇ ಗೊತ್ತಿಲ್ಲದೆ ಆತನನ್ನು ಅನೇಕ ಸಂಗತಿಗಳು ಕೈಹಿಡಿದು ಜಗ್ಗುತ್ತಿರುತ್ತವೆ. ಅಹಂಕಾರವೊಂದೇ ಸಾಕು; ಅದು ಗೆಲುವಿನ ಮೊದಲ ಶತ್ರು . ಸೋತೇನೆಂಬ ಭಯ, ಆತ್ಮ ನಿಂದನೆ, ಕೀಳರಿಮೆ, ಸರಿಯಾದ ಪ್ಲಾನ್ ಇಲ್ಲದಿರುವುದು, ಖಚಿತವಾದ ಗೋಲ್‌ಗಳಿಲ್ಲದಿರುವುದು, ಮಾಡಬೇಕು ಎಂದುಕೊಂಡ ಕೆಲಸಗಳನ್ನು ಮುಂದಕ್ಕೆ ಹಾಕುತ್ತಾ ಹೋಗುವುದು, ಮನೆ ಮಂದಿಯೆಲ್ಲರ ಜವಾಬ್ದಾರಿಯನ್ನು ಹೊತ್ತು ಬಿಡುವುದು, ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾದ್ಯವಾಗದೇ ಹೋಗುವುದು, ಚಿಕ್ಕ ಪುಟ್ಟ ಲಾಭಗಳಿಗಾಗಿ ದೊಡ್ಡ ಮಟ್ಟದ ದೂರದರ್ಶಿತ್ವ ಕಳೆದುಕೊಳ್ಳುವುದು, ಪ್ರತಿಯೊಂದನ್ನೂ ತಾನೇ ಮಾಡುತ್ತಾ ಹೋಗುತ್ತೇನೆನ್ನುವುದು, ಕಮಿಟ್‌ಮೆಂಟೇ ಇಲ್ಲದಿರುವುದು, ಸರಿಯಾದ ತರಬೇತಿ ಇಲ್ಲದೇ ಹೋಗುವುದು, ಹಿಡಿದ ಕೆಲದ ಮುಗಿಸಿ ತೀರುತ್ತೇನೆ ಎಂಬ ಹಟದ ಕೊರತೆ, ಯಾವುದನ್ನು ಮೊದಲು ಮಾಡಬೇಕು ಎಂಬ ಪರಿಜ್ಞಾನವಿಲ್ಲದಿರುವುದು-ಇವೆಲ್ಲವೂ ಒಬ್ಬ ಮನುಷ್ಯನನ್ನು ಗೆಲುವಿನಿಂದ ಹೊಂದಕ್ಕೆ ಎಳೆದುಬಿಡುತ್ತವೆ.
ಕ್ಷಮಿಸಿ, ಮೊನ್ನೆ ಗೆಲುವಿನ ಬಗ್ಗೆ ಪುಸ್ಕವೊಂದನ್ನು ಓದುತ್ತಿದ್ದಾಗ ನಾನು ಮಾಡಿಕೊಂಡ ಚಿಕ್ಕ ಟಿಪ್ಪಣಿಯದು. ಪುಸ್ತಕವನ್ನು ಬರೆದವರು ಶಿವ್‌ಖೇರಾ.

ಓ ಮನಸೇ..


O Manase - Read on ipad, iphone, smart phone and tablets
ಹುಡುಗೀರೇಕೆ ಓವರ್ ರಿಯಾಕ್ಟ್ ಮಾಡುತ್ತಾರೆ? ಎಲ್ಲ ಹುಡುಗೀರು ಹೀಗೇ ಎಂದಲ್ಲ, ಆದರೆ ಬಹುತೇಕ ಹುಡುಗೀರು ಹೀಗೇ.. ಎಲ್ಲವನ್ನೂ ಅತಿಯಾಗಿ ಮಾಡುವುದು ಹೆಣ್ಮಕ್ಕಳ ಜನ್ಮಸಿದ್ಧ ಹಕ್ಕಾ ಅನ್ನುವುದರ ಬಗ್ಗೆ ಸಂಶೋಧನಾತ್ಮಕ ಲೇಖನ. ಹುಡುಗೀರು ಬೇಜಾರು ಮಾಡ್ಕೊಳ್ಳದೇ ಓದಬೇಕಾಗಿ ವಿನಂತಿ. ಅಮ್ಮಾ...ನಿನಗಾಗಿ ಬಸುರಿಯ ಬಯಕೆ ಮತ್ತು ಭಯಕ್ಕೆ ಆರೈಕೆ ಕಂದನ ಸ್ವಾಗತಕ್ಕೆ ಸಂಭ್ರಮದಿಂದ, ಆತಂಕದಿಂದ ಕಾಯುತ್ತಿರುವ ಗರ್ಭಿಣಿಯರಿಗೆ ಕಿವಿಮಾತು. ಇದನ್ನು ಓದಿದರೆ ನಿಮಗೆ ಚಂದದ ಆರೋಗ್ಯವಂತ ಮಗು ಹುಟ್ಟೋದು ಗ್ಯಾರಂಟಿ. ಮಿದುಳು ಛಿದ್ರ, ಆದರೂ ಬದುಕು ಭದ್ರ ಮಿದುಳಿಗೆ ಹಾರೆ ಹಾಕಿ ಮೀಟಿಕೊಂಡರೂ ಬದುಕುಳಿದು, ವಿಜ್ಞಾನಕ್ಕೆ ಸವಾಲಾದವನ ಕತೆ ಹೇಳ್ತಾರೆ ನಾಗೇಶ್ ಹೆಗಡೆ. ಪ್ರೀತಿ ಪಾರಿಜಾತ ಅವರು ಇಮ್ರೋಜ್, ಇವಳು ಅಮೃತಾ. ಧರ್ಮ, ಸಮಾಜ, ಕಾನೂನಿನ ಹಂಗಿಲ್ಲದೇ ಮೂರು ದಶಕ ಜೊತೆಯಾಗಿ ಬಾಳಿದ ಇಬ್ಬರು ಪ್ರೇಮಿಗಳ ಕತೆ ಸಿಂಗ್ ಈಸ್ ಕಿಂಗ್ ಮುತ್ತಿನಹಾರದ ಹಿಂದೆ ಬಿದ್ದು ಇದ್ದುದೆಲ್ಲವನ್ನೂ ಕಳಕೊಂಡು, ಕ್ಲಾಸಿಕ್ ಸಿನಿಮಾ ಮಾಡಿದ ಖುಶಿಯನ್ನಷ್ಟೇ ಪಡೆದುಕೊಂಡ ದಿಲ್ ದಾರ್ ನಿರ್ದೇಶಕನ ಕತೆ. ಕಾಮಾಕ್ಷಿಯ ಮನೆಗೆ ಪೂರಿ-ಕ್ಷೀರ.. ಜಾನಕಿ ಕೊಂಚ ಪೋಲಿಯಾಗುವ ಥರ ಕಾಣಿಸ್ತಿದಾರೆ, ಯಾಕೋ..? ಈ ಮನುಷ್ಯನ ಅಕೌಂಟಿಗೆ ದಿನಾ ಬಂದು ಬೀಳುತ್ತೆ 86,400 ರುಪಾಯಿ ಅಪ್ಪನ ಪತ್ರದಲ್ಲಿ ಮನಿ ಮ್ಯಾನೇಜ್ ಮೆಂಟ್ ತರಬೇತಿ ಬಾಲ್ಯದ ಆಟ, ಆ ಹುಡುಗಾಟ.... ಗೋಲಿ, ಗಿಲ್ಲಿದಾಂಡು, ಮರಕೋತಿ, ಹುಲಿಕಟ್ಟು, ಚೌಕಾಬಾರಾ....ಇವೆಲ್ಲ ಆಟಗಳ ಹೆಸರು ಕೇಳಿದ್ದೀರಾ?...ಈ ಮಳೆಗಾಲದಲ್ಲಿ ನೀವಿದನ್ನೆಲ್ಲಾ ಆಡಲೇಬೇಕು. ಹೇಗೆ ಅಂತ ಹೇಳಿಕೊಡ್ತೀವಿ ಬನ್ನಿ. ಗ್ಯಾಜೆಟ್ ಲೋಕದ ರಜನಿಕಾಂತ್ ಈ ಒಂದು ಉಪಕರಣ ನಿಮ್ಮ ಕೈಲಿದ್ದರೆ ಮೊಬೈಲ್, ಕಂಪ್ಯೂಟರ್, ಲಾಪ್ ಟಾಪ್, ಟ್ಯಾಬ್ಲೆಟ್ಟು ಎಲ್ಲವೂ ಇದ್ದಂತೆ. ಏನಿದು ಫೈನ್ ಇನ್ ಒನ್? ದೇವರಿಗೆ ಹರಕೆ ಹೊರೋರು ಮೂರ್ಖರು ಹಾಗಂತ ಕಲ್ಪುರ್ಗಿಯವರು ಹೇಳಿಲ್ಲ, ನಮ್ಮ ಆಚಾರವಿಚಾರದ ಗೀತಾಸುತ ಅವರ ಸಂಶೋಧನೆ. ಪ್ರತಿಭಟನೆಗೆ ರೆಡಿಯಾಗಿ. ಇವೆಲ್ಲದರ ಜೊತೆಗೆ ಸೈನ್ಸ್ ಪೇಜ್, ಸಮಾಧಾನ, ಗುಣಮುಖ, ಲಾ ಪಾಯಿಂಟು, ಸೈಡ್ ವಿಂಗ್, ಫೇಸ್ ಬುಕ್ ಪದ್ಯಗಳು ಮೊದಲಾದ ಅಂಕಣಗಳು.

to read this buy o manase 20.00 Buy O Manase 93
========================================================================
ಇದೆಂಥ ವಿಚಿತ್ರವೋ!
ಎರಡು ತಲೆಯ ಹಾವಿಗೆ, ಹದಿನಾರು ಕಾಲುಗಳ ಆಮೆಗೆ, ಕರಿ ಬೆಕ್ಕಿಗೆ, ಎಡಮುರಿ ಅಥವಾ ಬಲಮುರಿ ಶಂಖಕ್ಕೆ ಕೋಟಿ ಕೋಟಿ ರುಪಾಯಿ ಸಿಗುತ್ತಾ?
’ಸಿಗುತ್ತೇನೋ’ ಅಂತ ಅವುಗಳ ಬೆನ್ನು ಬಿದ್ದವರೆಷ್ಟೋ?
ಹಾಗಾದ್ರೆ, ಎರಡು ತಲೆ ಹಾವಿರೋದು ನಿಜಾನಾ ?
ಕರಿಬೆಕ್ಕಿನ ನಾಲಗೆ ಕಪ್ಪಗೇ ಏಕಿರಬೇಕು?
ಆ ಐನೂರು ನಾಣ್ಯಗಳು ಸಿಕ್ಕಿಬಿಟ್ಟರೆ ಇಂದಿರಾಗಾಂಧಿಯ ಸ್ವಿಸ್ ಬ್ಯಾಂಕ್ ಅಕೌಂಟ್ ನಂಬರ್‍ ಸಿಗುತ್ತಾ?
ಈ ಸಲದ ಓ ಮನಸೇ ಅತ್ಯಂತ ಕುತೂಹಲಭರಿತವಾಗಿದೆ.
ಜೊತೆಗೇ…
  • Ø ’ಲವ್ ಲಿಕ್ವಿಡ್’ ಎಂಬ ಮಧುರ ಔಷಧ!
  • Ø ಗ್ರಾಮೋಫೋನ್ ಯುಗದ ಸಾಮ್ರಾಜ್ಞಿ ಶಂಷಾದ್ ಬೇಗಂ!
  • Ø ಜಗದ್ವಿಖ್ಯಾತ ಪತ್ರಿಕೆ ರೀಡರ್‍ಸ್ ಡೈಜೆಸ್ಟ್ ಮುಚ್ಚಿ ಹೋಗುತ್ತಾ?
  • Ø ಮಹಿಳೆಯರು ಹತ್ತು ಜನ ಹೇಳಿದ್ದನ್ನೇ ಯಾಕೆ ಹೇಳ್ತಾರೆ?
  • Ø ಇನ್ನೂ ಅಷ್ಟು ವಿಷಯ ವೈವಿಧ್ಯತೆಗಳು.
ಬದುಕಿನ ಪಾಸಿಟಿವ್ ಸೈಡನ್ನೇ ಹೆಚ್ಚಾಗಿ ಹೇಳುವ ’ಓ ಮನಸೇ’ ಖಂಡಿತಾ ನಿಮ್ಮ ಕುತೂಹಲಗಳಿಗೆ ಕನ್ನಡಿಯಾಗುತ್ತದೆ.


o manase

ಉಹುಂ, ಸಾಲದು. ’ಓ ಮನಸೇ…’ ಪತ್ರಿಕೆಯಲ್ಲಿ ಇನ್ನೂ ಉತ್ತಮ ಮಟ್ಟದ ಲೇಖನಗಳನ್ನು ನಿರೀಕ್ಷಿಸುತ್ತೇನೆ’ ಎಂದು ಅಪರಿಚಿತ. ಅಗೋಚರ ಓದುಗರೊಬ್ಬರು ನನಗೆ ಕಳೆದ ವಾರ ಮೆಸೇಜ್ ಕಳುಹಿಸಿದ್ದರು. ಅಲ್ಲಿಂದ ಶುರುವಾಯಿತು ನನ್ನ ಚಡಪಡಿಕೆ. ನೀವು ಎಷ್ಟರ ಮಟ್ಟಿಗೆ ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ: ನನ್ನ ಪತ್ರಿಕೆಯ ನಿಲುವನ್ನು ಯಾರಾದರೂ ಖಂಡಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ, ಟೀಕಿಸಿ ಬರೆದ ಪತ್ರಗಳನ್ನು ಶ್ರದ್ದೆಯಿಂದ ಓದಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆ ಅಂತ ಓದುಗ ಸೂಚಿಸಿದಾಗ ತಿದ್ದುಕೊಳ್ಳುತ್ತೇನೆ, ಕ್ಷಮೆ ಕೇಳುತ್ತೇನೆ. ಆದರೆ ನಾನು ಕೈಗಿತ್ತ ’ಪತ್ರಿಕೆ’ ಸಂತೃಪ್ತಿಕರವಾಗಿಲ್ಲ ಅನ್ನಿಸಿದಾಗ ಮಾತ್ರ ತಳಮಳಗೊಂಡು ಬಿಡುತ್ತೇನೆ. ಅದು ನನ್ನ Product. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ನಾನು ಮಾಡಿದ ಅತ್ಯಂತ ಶ್ರದ್ದಾವಂತ ಕೆಲಸವೆಂದರೆ, ಬರವಣಿಗೆಯೊಂದೇ. ನನ್ನ ಈ ಕೆಲಸದ ಬಗ್ಗೆ ನಾನು ಭಯಂಕರ ಪೊಸೇಸೀವ್. ಅಷ್ಟೂ ನಾನೇ ಬರೆಯಬೇಕು, ನನ್ನ ಕಣ್ತಪ್ಪಿ ಯಾವುದೂ ಪ್ರಿಂಟಿಗೆ ಹೋಗಬಾರದು, ಎಲ್ಲೂ ರುಚಿ ಕೆಡಬಾರದು ಅಂತ ಹಟಕ್ಕೆ ಬೀಳುವುದರಿಂದಲೇ ಕೆಲವೊಮ್ಮೆ ಪತ್ರಿಕೆ, ಪುಸ್ತಕ ತಡವಾಗಿ ಅಚ್ಚಿಗೆ ಹೋಗುತ್ತವೆ. ಅದರಿಂದ ಪ್ರಸಾರ ಸಂಖ್ಯೆಯ ಮೇಲೆ ಪರಿಣಾಮವಾಗುತ್ತದೆ ಅಂತ ನಿವೇದಿತಾ ಬಯ್ಯುತ್ತಾಳೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ನಾನು ನನ್ನ ಓದುಗರನ್ನು ಕಳೆದುಕೊಂಡಿಲ್ಲ. ಹೋಟೇಲಿನ ಬಾಗಿಲು ತೆರೆಯುವುದು ಕೊಂಚ ತಡವಾದರೇನಂತೆ? ಕಾಫಿಯ ಸೊಗಸು ನಿರೀಕ್ಷಿಸಿದಂತೇ ಇದ್ದರೆ ಬೇಸರಿಸದ ದೊರೆ, ಕಾಫಿ ಕುಡಿದುಕೊಂಡೇ ಮುನ್ನಡೆಯುತ್ತಾನೆ.
ಅದಿರಲಿ, ಕಳೆದವಾರ ಬಂದ ಮೆಸೇಜು ನನ್ನನ್ನು ನಿಜಕ್ಕೂ ತಳಮಳಕ್ಕೆ ಈಡು ಮಾಡಿತ್ತು. ಒಂದು ಸಲ ಕುಳಿತು ಹಳೆಯ ಸಂಚಿಕೆಗಳನ್ನೆಲ್ಲ ತಿರುವಿ ಹಾಕಿದೆ. ಓದುಗ ದೊರೆ ಯಾವುದನ್ನು miss ಮಾಡಿಕೊಳ್ಳುತ್ತಿದ್ದಾನೆ ಅಂತ ಗಮನಿಸಿದೆ. ಆಮೇಲೆ ಬೇರೆ ಬೇರೆ ಭಾಷೆಗಳ ಕೆಲವು ಪತ್ರಿಕೆಗಳನ್ನು ತರಿಸಿಕೊಂಡು ನೋಡಿದೆ. ಇಂಟರ್‍‌ನೆಟ್‌ನಲ್ಲಿ ಸಿಗುವ ವಿಶೇಷ ಮ್ಯಾಗಝೀನ್‌ಗಳನ್ನು ಓದಿಕೊಂಡೆ. ಆ ನಂತರವೇ ನಾನು ’ಓ ಮನಸೇ..’ ಪತ್ರಿಕೆಯ ೭೩ ನೇ ಸಂಚಿಕೆಯ ಸೃಷ್ಟಿಗೆ ಕುಳಿತಿದ್ದು. ಈಗಾಗಲೇ ಅದು ಮಾರುಕಟ್ಟೆಯಲ್ಲಿದೆ. ನೀವು ಪ್ರೀತಿಯಿಂದ ಓದುತ್ತೀರಿ ಎಂಬ ವಿಶ್ವಾಸ ನನಗಿದೆ. ಸಧಬಿರುಚಿಯ, ವಿಷಯ ವೈವಿದ್ಯತೆಯುಳ್ಳ ಆ ಪತ್ರಿಕೆ ಬೆಳೆಯಬೇಕು. ನನ್ನ ನಂತರವೂ ಅದು ನನ್ನ ನೆನಪಾಗಿ ಉಳಿಯಬೇಕು.
ನಿಮ್ಮಲ್ಲಿ ಮತ್ತೆ ಅದನ್ನೇ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಮೂವರ ಮಿತ್ರರಿಗೆ ’ಓ ಮನಸೇ…’ ಪತ್ರಿಕೆಯನ್ನು ಪರಿಚಯಿಸಿ.
-ಬೆಳಗೆರೆ




No comments:

Post a Comment