Saturday, November 22, 2014

O Manase 101

O Manase 101
O Manase - Read on ipad, iphone, smart phone and tablets
ಶತಕದ ಸಂಭ್ರಮದ ನಂತರ ಬರುತ್ತಿರುವ ಮೊದಲ ಸಂಚಿಕೆ.. ಓ ಮನಸೇ.. ೧೦೧ ಈಗ ಮಾರುಕಟ್ಟೆಯಲ್ಲಿ... ಮಾತೇ ಮುತ್ತು ಮಾತೇ ಶತ್ರು ಬರಹಗಾರರಿಗೆ ಒಂದು ಮಾನ್ಯತೆಯನ್ನು ತಂದುಕೊಟ್ಟ ಉದ್ಯಮವೆಂದರೆ ಟೀವಿ ಸೀರಿಯಲ್ಲು. ಸಿನಿಮಾಗಳಲ್ಲಿ ಡೈಲಾಗು ಬರೆಯುವವರಿಗೆ ಮರ್ಯಾದೆ ಮತ್ತು ಸಂಭಾವನೆ ಎರಡೂ ಕಡಿಮೆಯಾಗಿದ್ದ ಕಾಲದಲ್ಲಿ ಈ ಶೋಷಿತವರ್ಗಕ್ಕೆ ಆಶಾಕಿರಣವಾಗಿ ಕಾಣಿಸಿದ್ದು ಸೀರಿಯಲ್ ಲೋಕ. ಈಗ ದಿನಕ್ಕೆ ೫೪ ಸೀರಿಯಲ್ಲುಗಳು ಪ್ರಸಾರವಾಗುತ್ತಿವೆ, ನೂರಾರು ಬರಹಗಾರರು ಇವುಗಳನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಸೃಜನಶೀಲತೆ ಮತ್ತು ಆರೋಗ್ಯದ ಪ್ರಶ್ನೆ ಬಂದಾಗ ಸೀರಿಯಲ್ಲುಗಳು ಒಬ್ಬ ಬರಹಗಾರನನ್ನು ಕೊಲ್ಲುತ್ತಿವೆ ಅನ್ನುವುದೂ ಕೂಡಾ ಅಷ್ಟೇ ಸತ್ಯ. ಮಾತನ್ನೇ ಹರಿಗೋಲಾಗಿಸಿಕೊಂಡು ಸಂಸಾರ ಶರಧಿಯನ್ನು ದಾಟುತ್ತಿರುವ ರೈಟರುಗಳ ಬಗ್ಗೆ ಇಲ್ಲೊಂದು ಅನುಕಂಪಭರಿತ ಬರಹವಿದೆ. ಕಣ್ಣೀರಿಡುತ್ತಲೇ ಓದಿಕೊಳ್ಳಿ. ಸೀರಿಯಲ್ ಕಹಾನಿ ಫೇಸ್ಬುಕ್ ಕ್ರಾಂತಿಯ ಕಾಲದಲ್ಲಿ ರೋಸಾ ನೆನಪು ಫೇಸ್ ಬುಕ್ಕಲ್ಲಿ ವ್ಯವಸ್ಥೆಯ ವಿರುದ್ಧ ಒಂದು ಸ್ಟೇಟಸ್ ಹಾಕಿದ್ದನ್ನೇ ಕ್ರಾಂತಿ ಎಂದು ಅಂದುಕೊಳ್ಳುವ ಈಗಿನ ತಲೆಮಾರಿಗೆ ಅಸಲಿ ಹೋರಾಟದ ಬಿಸಿಯೇ ಗೊತ್ತಿಲ್ಲ. ಹೋರಾಟ ಅಂದರೆ ಅನ್ಯಾಯದ ವಿರುದ್ಧ ಮುಖಾಮುಖಿಯಾಗುವುದು, ಅದಕ್ಕೊಂದು ತಾರ್ಕಿಕ ಅಂತ್ಯ ದೊರಕುವ ತನಕ ವಿರಮಿಸದೇ ಇರುವುದು. ಆ ಕೆಲಸ ಮಾಡಿ, ಗೆದ್ದ ಕರಿಯ ಹೆಣ್ಮಗಳೊಬ್ಬಳ ಕತೆ ಇಲ್ಲಿದೆ. ಓದಿ ಚೈತನ್ಯದ ಚಿಲುಮೆ. ಕಾವಿಯೊಳಗಿನ ಕಾಮಕ್ಕೆ ಫುಲ್‌ಸ್ಟಾಪಿಲ್ಲ ಈಗಿನ ವ್ಯವಸ್ಥೆಯಲ್ಲಿ ಮಠಗಳು ಸನ್ಯಾಸಿಗಳನ್ನು ತಯಾರು ಮಾಡುತ್ತಿರುವ ರೀತಿಯೇ ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿದೆ. ಸನ್ಯಾಸವೆಂಬುದು ಒಂದು ಮನಸ್ಥಿತಿ. ಅದು ನಮ್ಮೊಳಗೇ ಹುಟ್ಟಬೇಕು. ಶಂಕರಾಚಾರ್ಯರು ಸನ್ಯಾಸಿಯಾಗಿದ್ದು ಹೀಗೆ. ಆದ್ದರಿಂದಲೇ ಅವರು ಪರಮಾಚಾರ್ಯರಾದರು. ಆದರೆ, ಈಗ ಹಿರಿಯ ಸ್ವಾಮಿಗಳಿಗೆ ವಯಸ್ಸಾಯಿತು ಎಂದು ಮಠದ ಆಡಳಿತ ಮಂಡಳಿಗಳು ಯಾವುದೋ ಊರಿನಲ್ಲಿ ಆಟವಾಡಿಕೊಂಡಿದ್ದ ಮೀಸೆ ಮೂಡದ ಹುಡುಗನನ್ನು ತಂದು ಕೂದಲು ತೆಗೆಸಿ ಸನ್ಯಾಸ ದೀಕ್ಷೆ ಕೊಡಿಸಿಬಿಡುತ್ತವೆ. ಅವನು ನಿಜವಾದ ಸನ್ಯಾಸಿಯಾಗಲು ಹೇಗೆ ಸಾಧ್ಯ? ಪ್ರಶ್ನೆಗಳಿವೆಯೇ.. ಉತ್ತರಕ್ಕಾಗಿ ಓದಿ ಇದ್ದದ್ದು ಇದ್ಹಾಂಗೆ. ಗುರಿಯಿಲ್ಲದೇ ಬದುಕಿದ ಗುರುವಿನ ದುರಂತ ಕತೆ ಬ್ರಾಹ್ಮಣನಾಗಿ ಹುಟ್ಟಿ ಕ್ಷತ್ರಿಯನಂತೆ ಹೋರಾಡಿ ಮಹಾಭಾರತ ಯುದ್ಧದಲ್ಲಿ ಮಡಿದ ದ್ರೋಣನ ಜೀವಿತದ ಉದ್ದೇಶ ಏನಾಗಿತ್ತು? ಏಕಲವ್ಯನ ಬೆರಳು ಪಡೆದ ಅವರ ಮನಸ್ಸಲ್ಲೇನಿತ್ತು? ಎರಡೂ ಕಡೆ ತನ್ನ ಶಿಷ್ಯರಿದ್ದಾಗ, ಅಧರ್ಮದ ಪರ ನಿಂತಿದ್ದೇನೆ ಎಂದು ಗೊತ್ತಿದ್ದೂ ಯುದ್ಧ ಮಾಡುವಾಗ ಅವರು ಏನು ಸಂಕಟ ಪಡುತ್ತಿದ್ದರು? ಇವೆಲ್ಲವೂ ಇಂದಿಗೂ ನಿಗೂಢ. ಪುರಾಣ ಪ್ರಪಂಚದಲ್ಲಿ ದ್ರೋಣಾಚಾರ್ಯರ ಆಂತುರ್ಯ ಕಂಡೀತೇ ಓದಿ ನೋಡಿ.. ದೀಪಾವಳಿ ಹಬ್ಬದ ಖಾಯಂ ಅತಿಥಿ ಬಲಿ ಭಗವಂತ ಕೃಪೆ ಮಾಡಿದರೆ ಯಾರು ಏನೂ ಆಗಬಲ್ಲರು. ಭಕ್ತರಿಗಾಗಿ ಭಗವಂತನೂ ಸಹ ಏನೂ ಆಗಬಲ್ಲನು ಅನ್ನುವುದಕ್ಕೆ ಬಲಿ ಶ್ರೇಷ್ಠ ಉದಾಹರಣೆ. ಈ ನೆನಪಿನಾರ್ಥವಾಗಿಯೇ ಪ್ರತಿವರ್ಷ ನಾವು ದೀಪಾವಳಿಯನ್ನು ವೈಭವದಿಂದ ಆಚರಿಸೋದು. ವಿಷ್ಣುವಿನ ವರದಂತೆ ಪ್ರತಿದಿನ ನಮ್ಮೆಲ್ಲರ ಯೋಗಕ್ಷೇಮ ವಿಚಾರಿಸಲಿಕ್ಕೆ ಬಲಿ ಬರ‍್ತಾನೆ. ಹಾಗಾಗಿ ಈ ದಿನದಲ್ಲಿ ಬಲಿಯನ್ನು ಪೂಜಿಸಿ ಗೌರವಿಸುವ ಪದ್ದತಿ ಆಚರಣೆಯಲ್ಲಿದೆ. ಬನ್ನಿ, ಬಲಿಚಕ್ರವರ್ತಿಯ ಕತೆಯನ್ನು ಆಲಿಸಿ ಪುಣ್ಯ ಸಂಪಾದಿಸಿ ಆಚಾರ ವಿಚಾರದಲ್ಲಿ. ಸುಝುಕಿ ಜಿಕ್ಸರ್, ಯುವಕರ ರಾಕ್‌ಸ್ಟಾರ್! ಬೈಕ್ ರೈಡಿಂಗ್ ಎಂಜಾಯ್ ಮಾಡುವ ಪ್ರತಿಯೊಬ್ಬರಿಗೂ ಜಿಕ್ಸರ್ ಬೆಸ್ಟ್. ಆದರೆ ಈ ಬೈಕ್ ಸ್ವಲ್ಪ ಎತ್ತರಕ್ಕಿರುವವರಿಗೆ ಚೆನ್ನಾಗಿದೆ. ಸೀಟ್ ಎತ್ತರ ೭೮೦ಎಂಎಂ ಇರುವುದರಿಂದ ಕುಳ್ಳಗೆ ಇರುವವರಿಗೆ ಸ್ವಲ್ಪ ಕಷ್ಟ. ಇನ್ನೂ ಡೀಟೇಲ್ಸ್ ಬೇಕೇ ವಾಟ್ಸ್ ಆಪ್ ಕಾಲಂನಲ್ಲಿ ನೋಡಿ. ಆದಾಯ ಇರುವ ಕಡೆಯೆಲ್ಲಾ ತೆರಿಗೆಯೂ ಇರುತ್ತದೆ ಆದಾಯ ತೆರಿಗೆ ಕಾನೂನಿನಡಿಯಲ್ಲಿ ಯಾವುದೇ ಸ್ಥಿರಾಸ್ಥಿಗಳನ್ನು ಮಾರಾಟ ಮಾಡಿದಾಗ ಬರುವ ಲಾಭಕ್ಕೆ ತೆರಿಗೆ ಕಟ್ಟಬೇಕು. ಇದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎನ್ನುತ್ತಾರೆ. ನೆನಪಿರಲಿ, ನೀವು ತೆರಿಗೆ ಕಟ್ಟಬೇಕಾದ್ದು ಲಾಭಕ್ಕೆ ಮಾತ್ರ, ಮಾರಾಟದ ಒಟ್ಟು ಮೊತ್ತಕ್ಕೆ ಅಲ್ಲ. ಆದಾಯ ತೆರಿಗೆ ಮೂಲ ಮಂತ್ರವೇ ಹಾಗೆ. ನಿಮ್ಮ ಆದಾಯಕ್ಕೆ ತೆರಿಗೆ. ಹೆಚ್ಚಿನ ವಿವರಗಳು ಲಾ ಪಾಯಿಂಟ್‌ನಲ್ಲಿ.. ಇದರೊಂದಿಗೆ ಒಂದಷ್ಟು ಕವನ, ಪುಟ್ಟ ಲೇಖನಗಳು, ಮೆಚ್ಚಿದ ಹಾಡುಗಳ ಬಗ್ಗೆ ಓದುಗರು ಬರೆದುಕೊಂಡ ಪತ್ರಗಳು ಎಲ್ಲವನ್ನೂ ತುಂಬಿಕೊಂಡು ಬರುತ್ತಿದೆ ಓ ಮನಸೇ ೧೦೧ನೇ ಸಂಚಿಕೆ...

No comments:

Post a Comment